BBK 13: ತಾಂಡವ್, ಸೋನಿಕಾ (Bigg Boss kannada 13) ಹಾಗೂ ಆಶಿಯಾಗೆ ಬಿಗ್ಬಾಸ್ ಕ್ಯಾಪ್ಟನ್ಸಿ ಓಟಕ್ಕೆ ಅನರ್ಹರಾಗಿರುವ ಸ್ಪರ್ಧಿಗಳ ಹೆಸರು ಹೇಳಲು ಸೂಚಿಸಿದಾಗ, ಮೂವರು ಸೇರಿ ಸೌಂದರ್ಯ, ಕಿರಣ್ ಶಾಸ್ತ್ರಿ, ಗಗನ್ ಹಾಗೂ ಜಗದೀಶ್ ಹೆಸರನ್ನ ಹೇಳಿದ್ದಾರೆ. ಈ ಆಯ್ಕೆಯಿಂದ ದೊಡ್ಮನೆಯಲ್ಲಿ ಕಂಟೆಸ್ಟೆಂಟ್ಸ್ಗಳ ನಡುವೆ ಜೋರು ಜಗಳ ಆಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಪ್ರತೀ ವಾರ ಒಬ್ಬೊಬ್ಬರಾಗೇ ಮನೆಯಿಂದ ಎಲಿಮಿನೇಟ್ ಆಗುತ್ತಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಿರುವಾಗ ಮನೆಯೊಳಗಿರುವ ಪ್ರತಿಯೊಬ್ಬರಿಗೂ ಟಾಸ್ಕ್ಗಳನ್ನ ಗೆದ್ದು ಮುಂದೆ ಸಾಗುವುದು ಅನಿವಾರ್ಯವಾಗಿದೆ. ಈ ವೀಕ್ನಲ್ಲಿ ತಮ್ಮ ಪ್ರೀತಿ ಪಾತ್ರರು ಬರೆದ ಪತ್ರಗಳನ್ನ ಟಾಸ್ಕ್ ಗೆದ್ದು ಪಡೆದಿರುವ ಸ್ಪರ್ಧಿಗಳಿಗೆ, ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ನೀಡುವ ಮೊದಲು ಗೇಮ್ನಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ.
ತಾಂಡವ್, ಸೋನಿಕಾ ಹಾಗೂ ಆಶಿಯಾಗೆ ಕಾಪ್ಟನ್ಸಿ ಓಟದಿಂದ ನಾಲ್ಕು ಸ್ಪರ್ಧಿಗಳನ್ನು ಹೊರಗಿಡಲು ಆಯ್ಕೆ ಮಾಡುವಂತೆ ಹೇಳಿದ್ದಾರೆ. ಆಗ ಮೂವರು ಸೇರಿ ಸೌಂದರ್ಯ, ಕಿರಣ್ ಶಾಸ್ತ್ರಿ, ಗಗನ್ ಹಾಗೂ ಜಗದೀಶ್ ಹೆಸರನ್ನು ಸೂಚಿಸಿದ್ದಾರೆ.ಇದನ್ನೂ ಓದಿ: ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ: ‘ರಾಮಾಯಣ’ ಸೀತೆ ಪಾತ್ರಕ್ಕಾಗಿ ನಾನೂ ಆಡಿಷನ್ ಕೊಟ್ಟಿದ್ದೆ ಎಂದ ಶ್ರೀನಿಧಿ ಶೆಟ್ಟಿ
ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗುಳಿದಿದ್ದಕ್ಕೆ ಬೇಸರಗೊಂಡ ಗಗನ್ ಮತ್ತು ಸೌಂದರ್ಯ ಆಶಿಯಾ ಮತ್ತು ಸೋನಿಕಾ ಜೊತೆ ಜಗಳವಾಡಿದ್ದಾರೆ. ಕ್ಯಾಪ್ಟನ್ ಆಗಿದ್ದಾಗ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಕಾರಣ ಕೊಟ್ಟರೂ ಕಿಚನ್ ಕ್ಲೀನ್ ಮಾಡೋ ವಿಚಾರಕ್ಕೆ ಸೋನಿಕಾ ಹಾಗೂ ಸೌಂದರ್ಯ ನಡುವೆ ಜಗಳ ಆಗಿದೆ. ಗಗನ್ ಕೂಡ ಆಶಿಯಾ ಮೇಲೆ ಬೇಸರ ವ್ಯಕ್ತಪಡಿಸಿದ್ದು, ಆಶಿಯಾ ಸಿಟ್ಟಿನಲ್ಲಿ ಮನೆಯಿಂದ ಯಾರ್ ಹೊರಗೆ ಹೋಗ್ತಾರೆ ನೋಡೋಣ ಎಂದೆಲ್ಲ ಸವಾಲ್ ಹಾಕಿದ್ದಾರೆ. ಇನ್ನು ಬಿಗ್ಬಾಸ್ ಮುಂದೆ ಸೂಚಿಸಿದ ಸ್ಪರ್ಧಿಗಳು ನಿಜವಾಗ್ಲೂ ಕ್ಯಾಪ್ಟನ್ಸಿ ಓಟದಿಂದ ಹೊರಗುಳಿಯುತ್ತಾರಾ ಅಥವಾ ಇಲ್ಲವಾ ಅನ್ನೋದನ್ನಾ ಕಾದು ನೋಡಬೇಕಿದೆ.ಇದನ್ನೂ ಓದಿ: ವಿಜಯಲಕ್ಷ್ಮಿ–ಧನ್ವೀರ್ ಜಟಾಪಟಿ ಕೇಸ್ – ನ.12ಕ್ಕೆ ವಿಚಾರಣೆಗೆ ಹಾಜರಾಗುವಂತೆ ಧನ್ವೀರ್ಗೆ ಸೂಚನೆ
