ಲಿಸ್ಬನ್: ಪೋರ್ಚುಗಲ್ನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ನಿವೃತ್ತಿಯ ನಿರ್ಧಾರವನ್ನ ಪ್ರಕಟಿಸಿದ್ದಾರೆ.
Portugal estará sempre em mim https://t.co/dnFj51rxmh
— Cristiano Ronaldo (@Cristiano) November 5, 2026
2016ರ ಯುರೋ ಕಪ್ನಲ್ಲಿ ಪೋರ್ಚುಗಲ್ (Portugal) ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೊನಾಲ್ಡೊ, ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ (International football ಅತಿ ಹೆಚ್ಚು ಗೋಲು ಗಳಿಸಿದ ಹಾಗೂ ಅತಿ ಹೆಚ್ಚು ಪಂದ್ಯಗಳನ್ನ ಆಡಿದ ಆಟಗಾರ ಎಂಬ ಖ್ಯಾತಿಯೊಂದಿಗೆ ವಿದಾಯ ಹೇಳುತ್ತಿದ್ದಾರೆ.
🚨🇵🇹 MAJOR BREAKING:
Cristiano Ronaldo has announced his RETIREMENT from international football with Portugal! 🐐
🏆🏆🏆 3 Trophies
👥 234 games
⚽️ 146 goals
🎯 45 assists#MUFC #CR7 👏 https://t.co/iumnSVyBJy
— The United Space (@TheUtdSpace) November 5, 2026
41 ವರ್ಷದ ರೊನಾಲ್ಡೊ ಪೋರ್ಚುಗಲ್ ಪರ 234 ಪಂದ್ಯಗಳಲ್ಲಿ ಒಟ್ಟು 146 ಗೋಲುಗಳನ್ನ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ಮೂರು ಟ್ರೋಫಿಗಳನ್ನೂ ತಂದುಕೊಟ್ಟಿದ್ದಾರೆ. ನವೆಂಬರ್ ತಿಂಗಳ ಅಂತಾರಾಷ್ಟ್ರೀಯ ಪಂದ್ಯಗಳ ವಿರಾಮದ ಬಳಿಕ ಪೋರ್ಚುಗಲ್ ತಂಡಕ್ಕೆ ತಮ್ಮ ಜೆರ್ಸಿಯನ್ನ (ಸಂಖ್ಯೆ 7) ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.
3 ಟ್ರೋಫಿ ತಂದುಕೊಟ್ಟ ರೊನಾಲ್ಡೊ
ಕಳೆದ 2 ದಶಕಗಳಿಗೂ ಹೆಚ್ಚು ಕಾಲ ಪೋರ್ಚುಗಲ್ ತಂಡದ ಆಧಾರಸ್ತಂಭವಾಗಿದ್ದ ರೊನಾಲ್ಡೊ, ತಂಡಕ್ಕೆ ಯುರೋ ಕಪ್ ಸೇರಿದಂತೆ 2 UEFA ನೇಷನ್ಸ್ ಲೀಗ್ ಪ್ರಶಸ್ತಿಗಳನ್ನ ಗೆಲ್ಲಿಸಿಕೊಡುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅಲ್ಲದೇ, ಪೋರ್ಚುಗಲ್ ಪರ 6 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. ಅವರ ಕೊನೆಯ ವಿಶ್ವಕಪ್ ಅಭಿಯಾನವು 16ರ ಸುತ್ತಿನಲ್ಲಿ ಸ್ಪೇನ್ ವಿರುದ್ಧ 1-0 ಗೋಲುಗಳ ಸೋಲಿನೊಂದಿಗೆ ಅಂತ್ಯಗೊಂಡಿತ್ತು.
ವಿಡಿಯೋ ಸಂದೇಶದಲ್ಲಿ ರೊನಾಲ್ಡೋ ಹೇಳಿರುವುದೇನು?
ತಮ್ಮ ವಿದಾಯದ ವಿಡಿಯೋನಲ್ಲಿ ಪೋರ್ಚುಗಲ್ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿರುವ ರೊನಾಲ್ಡೊ, ನನ್ನ ದೇಶದ ಜನರೇ, ನಮ್ಮ ರಾಷ್ಟ್ರೀಯ ತಂಡದ 7ನೇ ಸಂಖ್ಯೆಯ ಜೆರ್ಸಿಯನ್ನು ಹಸ್ತಾಂತರಿಸುವ ದಿನ ಬಂದಿದೆ. ಆ ಜೆರ್ಸಿ ಎಂದಿಗೂ ನನಗೆ ಮಾತ್ರ ಸೇರಿದ್ದಲ್ಲ ಎಂಬ ಭಾವನೆ ನನ್ನದು. ಆದರೆ 23 ವರ್ಷಗಳ ಕಾಲ ಅದನ್ನು ಧರಿಸುವ, ರಕ್ಷಿಸುವ ಮತ್ತು ವಿಶ್ವದಾದ್ಯಂತದ ಕ್ರೀಡಾಂಗಣಗಳಿಗೆ ಕೊಂಡೊಯ್ಯುವ ಸೌಭಾಗ್ಯ ಹಾಗೂ ಜವಾಬ್ದಾರಿ ನನಗೆ ದೊರೆತಿತ್ತು ಎಂದು ಭಾವುಕರಾಗಿದ್ದಾರೆ.
ಅಲ್ಲದೇ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರ್ಧಾರ ಸುಲಭವಾಗಿರಲಿಲ್ಲ ಎಂದು ಒಪ್ಪಿಕೊಂಡಿರುವ ರೊನಾಲ್ಡೊ, ಮುಂದಿನ ಪೀಳಿಗೆಯ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಈಗ ಭವಿಷ್ಯದ ಪೀಳಿಗೆಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಸಮಯ ಬಂದಿದೆ. ಇದು ಸುಲಭದ ನಿರ್ಧಾರವಾಗಿರಲಿಲ್ಲ. ಏಕೆಂದರೆ ಕೆಲವು ನಿರ್ಧಾರಗಳನ್ನು ಕೇವಲ ಮನಸ್ಸಿನಿಂದ ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವು ಹೃದಯದಿಂದಲೂ ನಿರ್ಧಾರವಾಗುತ್ತವೆ. ಆಗಸ್ಟ್ 2003ರಲ್ಲಿ ಆರಂಭವಾದ ನನ್ನ ಪ್ರಯಾಣ, ನನ್ನ ಜೀವನವನ್ನೇ ಶಾಶ್ವತವಾಗಿ ಬದಲಿಸಿತು. ಇದೀಗ ಆ ಪ್ರಯಾಣ ಅಂತ್ಯಗೊಂಡಿದೆ ಅಂತಾ ತಿಳಿಸಿದ್ದಾರೆ.


