ಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಹೆಸರಿನಲ್ಲಿ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬೆಂಗಳೂರಿನ ಟೆಕ್ಕಿಯೊಬ್ಬನನ್ನ ಮುಂಬೈ ಕ್ರೈಂ ಬ್ರಾಂಚ್ (Mumbai Crime Branch) ಪೊಲೀಸರು ಬಂಧಿಸಿದ್ದಾರೆ.
ವೈಭವ್ ಮಿಶ್ರಾ ಬಂಧಿತ ಟೆಕ್ಕಿಯಾಗಿದ್ದಾನೆ.
ನಟರಾದ ತುಷಾರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ (Ayushmann Khurrana) ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ವೈಭವ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದ. ಆಡಿಯೋ ಬೆದರಿಕೆ ಸಂದೇಶಗಳನ್ನೂ ಕಳುಹಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ವೈಭವ್ ಮಿಶ್ರಾನನ್ನ ಬಂಧಿಸಿರುವ ಮುಂಬೂ ಕ್ರೈಂ ಬ್ರಾಚ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
