ಬೆಂಗಳೂರು: ರಾಜ್ಯ ಸರ್ಕಾರ (State Govt) ಕನ್ನಡ ರಾಜ್ಯೋತ್ಸವ ಬದಲು ಬೆಲೆ ಏರಿಕೆ ನಿತ್ಯೋತ್ಸವ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ (Bus Ticket Price Hike) ಕುರಿತು ವಿಧಾನಸೌಧದಲ್ಲಿ ಮಾತಾಡಿದ ಅವರು, ರಾಜ್ಯ ಸರ್ಕಾರ ಕನ್ನಡ ರಾಜೋತ್ಸವದ ಬದಲು ಬೆಲೆ ಏರಿಕೆ ನಿತ್ಯೋತ್ಸವ ಮಾಡುತ್ತಿದ್ದಾರೆ. ಜನರ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ. ಜನ ಕಾಂಗ್ರೆಸ್ಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ವಿದೇಶಿ ಶಕ್ತಿಗಳ ನೆರವಿನಿಂದ ಪ್ರಧಾನಿಯಾಗಿದ್ದು ಎಂದ ರಾಹುಲ್ ಗಾಂಧಿಗೆ ಬೊಮ್ಮಾಯಿ ತಿರುಗೇಟು
ಸಬ್ಸಿಡಿ ಕೊಡ್ತೀನಿ ಅಂದು ಈಗ ಬೆಲೆ ಏರಿಕೆ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನಲು ಆಗಲ್ಲ ಅಂತ ಎಫ್ಡಿ ಹೇಳಿದೆ. ಈಗ ಬೆಲೆ ಏರಿಕೆ ಮಾಡಿ ತುಪ್ಪ ತಿನ್ನುತ್ತಿದ್ದಾರೆ. ಗಂಡಸರ ಜೇಬಿಂದ ಕಿತ್ತು ಹೆಣ್ಣುಮಕ್ಕಳಿಗೆ ಕೊಡುತ್ತೀರಿ. ಅವರ ಜೇಬಿಂದ ಕಿತ್ತು ಇವರಿಗೆ ಕೊಡೋಕೆ ನೀವೇ ಬೇಕಾ ಎಂದು ಹರಿಹಾಯ್ದರು. ಇದನ್ನೂ ಓದಿ: ಗುವಾಹಟಿ ಹೋಟೆಲ್ ಫೈರಿಂಗ್ ಪ್ರಕರಣ – ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ಗೆ ಬಲಿ
