ಆಕ್ಲೆಂಡ್: ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ ತಂಡ (Team India) ಏಕದಿನ ಸರಣಿಯಲ್ಲೂ ತನ್ನ ಗೆಲುವಿನ ಓಟ ಮುಂದುವರಿಸಿದೆ. ಅನ್ಶುಲ್ ಕಾಂಬೋಕ್, ಅರ್ಷ್ದೀಪ್ ಸಿಂಗ್ ಬೆಂಕಿ ಬೌಲಿಂಗ್ ದಾಳಿ ಹಾಗೂ ವಿರಾಟ್ ಕೊಹ್ಲಿ ಕ್ಲಾಸಿಕ್ ಫಿಫ್ಟಿ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲಿಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಕೀವಿಸ್ 185 40.2 ಓವರ್ಗಳಲ್ಲಿ 185 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಮಳೆ ಅಡ್ಡಿಯಾದ ಹಿನ್ನೆಲೆ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 32 ಓವರ್ಗಳಲ್ಲಿ 143 ರನ್ಗಳ ಗುರಿ ನೀಡಲಾಯಿತು. 5 ವಿಕೆಟ್ ಕಳೆದುಕೊಂಡ ಭಾರತ ಈ ಗುರಿಯನ್ನ 22.4 ಓವರ್ಗಳಲ್ಲೇ ಪೂರೈಸಿತು.
ಕೊನೇ 29 ರನ್ಗಳಿಗೆ 4 ವಿಕೆಟ್ ಪತನ
ಮೊದಲ ಓವರ್ನಲ್ಲೇ 1 ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ್ದ ಕಿಂಗ್ ಕೊಹ್ಲಿ ಹಾಗೂ ನಾಯಕ ಶುಭಮನ್ ಗಿಲ್ ಜೋಡಿ ಉತ್ತಮ ಜೊತೆಯಾಟ ನೀಡಿತ್ತು. 2ನೇ ವಿಕೆಟ್ಗೆ ಈ ಜೋಡಿ 104 ಎಸೆತಗಳಲ್ಲಿ 113 ರನ್ಗಳ ಜೊತೆಯಾಟ ನೀಡಿತ್ತು. 18.2 ಓವರ್ಗಳಲ್ಲಿ ಭಾರತ 114 ರನ್ ಗಳಿಸಿದ್ದಾಗ ಶುಭಮನ್ ಗಿಲ್ ಔಟಾದರು. ಮುಂದಿನ 29 ರನ್ಗಳ ಅಂತರದಲ್ಲಿ ಭಾರತ 4 ವಿಕೆಟ್ಗಳನ್ನ ಕಳೆದುಕೊಂಡಿತ್ತು.
ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 74 ರನ್ (1 ಸಿಕ್ಸರ್, 13 ಬೌಂಡರಿ) ಚಚ್ಚಿದ್ರೆ, ಶುಭಮನ್ ಗಿಲ್ 37 ರನ್, ಶ್ರೇಯಸ್ ಅಯ್ಯರ್ 17 ರನ್ ಗಳಿಸಿ ಔಟಾರೇ, ಮಾಜಿ ನಾಯಕ ರೋಹಿತ್ ಶರ್ಮಾ ಅಕ್ಷರ್ ಪಟೇಲ್ ಸೊನ್ನೆ ಸುತ್ತಿದರು. ಕೊನೆಯಲ್ಲಿ ಕೆ.ಎಲ್ ರಾಹುಲ್ 3 ರನ್, ನಮನ್ ಧೀರ್ 5 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದರು.
ಟೀಂ ಇಂಡಿಯಾ ಪರ ಜಾಕೊಬ್ ಡಫಿ 3 ವಿಕೆಟ್ ಕಿತ್ತರೆ ಕೈಲ್ ಜೇಮಿಸನ್, ನಥಾನ್ ಸ್ಮಿತ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕಿವೀಸ್ ಪರ ಟಿಮ್ ಸೈಫರ್ಟ್ 38 ರನ್, ಡೇರಿಲ್ ಮಿಚೆಲ್ 28 ರನ್, ಫಿಲಿಪ್ಸ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಅಲ್ಪಮೊತ್ತಕ್ಕೆ ಔಟಾದರು. ಟೀಂ ಇಂಡಿಯಾ ಪರ ಅರ್ಷ್ದೀಪ್ ಸಿಂಗ್ 4 ವಿಕೆಟ್, ಅನ್ಶುಲ್ ಕಾಂಬೋಜ್ 2 ವಿಕೆಟ್, ಗುರ್ನೂರ್ ಬ್ರಾರ್ 3 ವಿಕೆಟ್ ಪಡೆದು ಮಿಂಚಿದರು.


