ಮೈಸೂರು: ಸ್ಕೂಟರ್ಗೆ (Scooter) ಸಾರಿಗೆ ಬಸ್ (Bus) ಡಿಕ್ಕಿಯಾದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ (Student) ಮೃತಪಟ್ಟಿರುವ ಘಟನೆ ಮೈಸೂರು (Mysuru) ಅರಮನೆಯ ಸನಿಹದ ಚಾಮರಾಜ ವೃತ್ತದ ಬಳಿ ನಡೆದಿದೆ.
ವೈಷ್ಣವಿ (17) ಮೃತ ವಿದ್ಯಾರ್ಥಿನಿ. ಮೈಸೂರಿನ ಎನ್ಆರ್ ಮೊಹಲ್ಲಾ ನಿವಾಸಿ ವೆಂಕಟೇಶ್ ಮತ್ತು ಜ್ಯೋತಿ ದಂಪತಿ ಪುತ್ರಿ ವೈಷ್ಣವಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: 2028 ರಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಂಕಲ್ಪ: ಹರೀಶ್ ದ್ವಿವೇದಿ
ಟ್ಯೂಷನ್ ಮುಗಿಸಿಕೊಂಡು ತಂದೆಯೊಂದಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ದೆಹಲಿ ಪೊಲೀಸ್ ಪ್ರಧಾನ ಕಚೇರಿ ಹೊರಗೆ ಪೊಲೀಸರ ಪ್ರತಿಭಟನೆಗೆ ನೇತೃತ್ವ – ಎಸಿಪಿ ಮನಸ್ವಿ ವಶಿಷ್ಠ ಅಮಾನತು
