– ವೇದಿಕೆಯಲ್ಲಿ ಕಣ್ಣೀರಿಟ್ಟು ಮಗಳನ್ನು ಮನೆಗೆ ಕರೆದ ಫಾತಿಮಾ ಪೋಷಕರು
‘ಬಿಗ್ ಬಾಸ್ ಮಲಯಾಳಂ 8’ರ (Bigg Boss Malayalam 8) ಇತ್ತೀಚಿನ ಸಂಚಿಕೆಯೊಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನೇಹಾ ಫಾತಿಮಾ ತಮ್ಮ ಸಹ ಸ್ಪರ್ಧಿಯೊಬ್ಬರಿಗೆ ಪ್ರೇಮ ನಿವೇದನೆ ಮಾಡಿದ್ದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬಿಗ್ ಬಾಸ್ ಮನೆಯಿಂದ ಹೊರ ಬರುವಂತೆ ಒತ್ತಾಯಿಸಿರುವ ಪ್ರಸಂಗ ನಡೆದಿದೆ.
ಈ ಸಂಚಿಕೆಯ ಪ್ರೋಮೋದಲ್ಲಿ, ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರು ಕಾರ್ಯಕ್ರಮದ ವೇದಿಕೆಯ ಮೇಲೆ ಭಾವುಕರಾಗಿ, ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೇಹಾಳ ಪೋಷಕರು, ಅವಳು ತನ್ನ ಸಹ ಸ್ಪರ್ಧಿ ತಾಶಿ ರಾಜ್ (ಅಸಲಿ ಹೆಸರು ಸಂತೋಷ್) ಎಂಬಾತನೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಕ್ಕೆ ಬೇಸರಗೊಂಡಿದ್ದರು. ಆಕೆಯ ಪೋಷಕರು ಅವಳನ್ನು ಕಾರ್ಯಕ್ರಮದಿಂದ ಹೊರಬರುವಂತೆ ಕೇಳಿದಾಗ, ಅವಳು ಅದಕ್ಕೆ ನಿರಾಕರಿಸಿದಳು. ಇದನ್ನೂ ಓದಿ: ಶ್ರೀಲೀಲಾಗೆ ಒಲಿದ ಅದೃಷ್ಟ – ಕಾಲಿವುಡ್ಗೆ ಅಧಿಕೃತ ಪ್ರವೇಶ
ಸಾಮಾನ್ಯವಾಗಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕುಟುಂಬದವರ ಭೇಟಿಗೆ ಸಮಯ ನಿಗದಿಪಡಿಸಲಾಗುತ್ತದೆ. ಆದರೆ, ಈಚಿನ ಸಂಚಿಕೆಯೊಂದರಲ್ಲಿ ನೇಹಾಳ ಪೋಷಕರಿಗಾಗಿ ಇದಕ್ಕೊಂದು ವಿನಾಯಿತಿ ನೀಡಲಾಗಿತ್ತು. ವೇದಿಕೆಯ ಮೇಲೆ ಮೋಹನ್ಲಾಲ್ ಅವರ ಪಕ್ಕದಲ್ಲಿ ನಿಂತು ಕಾರ್ಯಕ್ರಮದಲ್ಲಿ ತಮ್ಮ ಮಗಳೊಂದಿಗೆ ಮಾತನಾಡಿದ ಪೋಷಕರು, ಅವಳನ್ನು ಮನೆಗೆ ಮರಳಿ ಬರುವಂತೆ ಕೋರಿದರು.
ಪ್ರೋಮೋದಲ್ಲಿ ಆಕೆಯ ತಂದೆ, ‘ನೇಹಾ, ನಿನಗೆ ನಮ್ಮ ನೆನಪಿದೆಯೇ? ನಮಗೆ ಅನ್ನಿಸುವುದಿಲ್ಲ, ನಿನಗೆ ನೆನಪಿರಲಿಕ್ಕಿಲ್ಲʼ ಎನ್ನುತ್ತಾರೆ. ನೇಹಾಳ ತಾಯಿ ಭಾವುಕರಾಗಿ, ʼಅವರೆಲ್ಲರೂ ಆಟವಾಡುತ್ತಿದ್ದಾರೆ, ಆದರೆ ನೀನು ಭಾವನೆಗಳಿಗೆ ಅಂಟಿಕೊಂಡಿದ್ದೀಯಾ. ನಿನ್ನನ್ನು ಬಳಸಿಕೊಳ್ಳಲಾಗುತ್ತಿದೆ. ನಾವು ಆಡಬೇಡ ಎಂದು ಹೇಳಿದ್ದ ಆಟವನ್ನೇ ನೀನು ಆಡುತ್ತಿದ್ದೀಯಾ. ನೀನು ಯಾವುದೋ ಒಂದು ಭರವಸೆಯನ್ನು ಇಟ್ಟುಕೊಂಡಿದ್ದೀಯಾ, ಅಲ್ವಾ? ಇದರಿಂದ ನನಗೆ ಹೆಚ್ಚು ನೋವಾಗುತ್ತಿದೆ” ಎಂದು ಹೇಳಿದರು. ಇದನ್ನೂ ಓದಿ: ದರ್ಶನ್ಗಾಗಿ ಹರಕೆ ಹೊತ್ತ ವಿಜಯಲಕ್ಷ್ಮಿ- ತಿಪಟೂರಿನ ಚೌಲಿಹಳ್ಳಿ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ
ಈ ಪ್ರೋಮೋ ವೈರಲ್ ಆಗಿದ್ದು, ಕೋಮು ಸ್ವರೂಪವನ್ನು ಪಡೆದುಕೊಂಡಿದೆ. ನೇಹಾಳ ಮುಸ್ಲಿಂ ಪೋಷಕರು ಅವಳು ಹಿಂದೂ ವ್ಯಕ್ತಿಯೊಬ್ಬನೊಂದಿಗೆ ಪ್ರೇಮದಲ್ಲಿ ಬಿದ್ದಿರುವುದನ್ನು ವಿರೋಧಿಸಿದರು ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸಲಾಗಿದೆ.
