ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿರುವ ನಕಲಿ ಔಷಧಿ ಜಾಲದ ಪ್ರಕರಣಕ್ಕೆ (Fake Medicine Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಇಸಿಐಆರ್ ದಾಖಲಿಸಿರುವ ಅಧಿಕಾರಿಗಳು, ಬೆಂಗಳೂರಿನ ಐದು ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ವೀರೇಶ್ಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿರುವ ಇಡಿ ಅಧಿಕಾರಿಗಳು, ಖಾತೆಯಲ್ಲಿದ್ದ ಸುಮಾರು 9 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದಾರೆ. ಜೊತೆಗೆ ಡಿಜಿಟಲ್ ಸಾಧನಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪರವಾನಗಿ ಇಲ್ಲದೆ ಔಷಧಿ ತಯಾರಿಕೆ ಆರೋಪ
ಇಡಿ ತನಿಖೆಯಲ್ಲಿ ಔಷಧಿ ತಯಾರಿಕಾ ಪರವಾನಗಿ ಇಲ್ಲದೆ ಔಷಧಿಗಳನ್ನು ತಯಾರಿಸುವುದು, ಮರುಪ್ಯಾಕಿಂಗ್ ಮತ್ತು ಮರುಲೇಬಲಿಂಗ್ ಮಾಡಿರುವ ಆರೋಪಗಳು ಬೆಳಕಿಗೆ ಬಂದಿವೆ. ಆರ್. ಪ್ರಶಾಂತ್ ಎಂಬುವವರು ಬಿಡದಿ ಸಮೀಪದ ಫಾರ್ಮ್ಹೌಸ್ನಲ್ಲಿ ಈ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.ಇದನ್ನೂ ಓದಿ: 6ರ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ರಾಕ್ಷಸಿ ಕೃತ್ಯ – PUBG ಆಟದ ಪ್ರಭಾವವೇ ಕಾರಣವಾಯ್ತಾ?
ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸಿ, ಹೊಸ ವಯಲ್ಗಳಲ್ಲಿ ಮರುಪ್ಯಾಕ್ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಜಾಲದ ಕಾರ್ಯವೈಖರಿ ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಪ್ರಕರಣ – ಸಿಸಿಬಿ ವಿಚಾರಣೆಗೆ ಹಾಜರಾದ ಹೆಚ್ಡಿಕೆ ಪಿಆರ್ಒ ಪ್ರಜ್ವಲ್ ಪ್ರಸಾದ್
