ಕಠ್ಮಂಡು: ನೇಪಾಳದ (Nepal) ಸೋಲುಖುಂಬು ಜಿಲ್ಲೆಯಲ್ಲಿ ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ಗಳು ಮುಖಾಮುಖಿ ಡಿಕ್ಕಿಯಾಗಿ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಮತ್ತೋರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ.
ಮಂಗಳವಾರ (ನ.3) ಬೆಳಿಗ್ಗೆ ಸೋಲುಖುಂಬು (Solukhumbu) ಜಿಲ್ಲೆಯ ಖುಂಬು ಪಸಾಂಗ್ ಲಹ್ಮು ಗ್ರಾಮೀಣ ಪುರಸಭೆಯ ವಾರ್ಡ್ 4ರ ಫೆರಿಚೆ ಹೆಲಿಪ್ಯಾಡ್ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಭಾರತೀಯ ಪಜೆಯನ್ನು 47 ವರ್ಷದ ವಸಂತ್ ಕುಮಾರ್ ಬಲರಾ ಮಡು ಹಾಗೂ ಗಾಯಾಳುವನ್ನು ಭಾರತೀಯ ಮೂಲದ ನ್ಯೂಜಿಲೆಂಡ್ ಪ್ರಜೆ 53 ವರ್ಷದ ಶೈಲೇಶ್ ಕಿಶನ್ ಪಟೇಲ್ ಗುರುತಿಸಲಾಗಿದೆ. ಇದನ್ನೂ ಓದಿ: ಕಬಾಬ್ ಸೆಂಟರ್ಗೆ ನುಗ್ಗಿದ ಕಾರು – ಬಿಸಿ ಎಣ್ಣೆ ಮೈಮೇಲೆ ಬಿದ್ದು ಮೂವರಿಗೆ ಗಂಭೀರ ಗಾಯ
ಜಿಲ್ಲಾ ಪೊಲೀಸ್ ಕಚೇರಿಯ ಪ್ರಕಾರ, ಏರ್ ಡೈನಾಸ್ಟಿ ಮತ್ತು ಫಿಶ್ಟೇಲ್ ಏರ್ಗೆ ಸೇರಿದ ಹೆಲಿಕಾಪ್ಟರ್ಗಳು ಬೆಳಿಗ್ಗೆ ಸುಮಾರು 8:11ರ ಸುಮಾರಿಗೆ ಮುಖಾಮುಖಿ ಡಿಕ್ಕಿಯಾಗಿವೆ. ಹೆಲಿಪ್ಯಾಡ್ನಲ್ಲಿ ಇಳಿಯುವಾಗ ಎರಡೂ ಹೆಲಿಕಾಪ್ಟರ್ಗಳ ಬ್ಲೇಡ್ಗಳು ಪರಸ್ಪರ ಬಡಿದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.
#WATCH | Two helicopters collide at Nepal’s Everest Base Camp, killing one foreign national and injuring a Nepali national, with police confirming the casualties https://t.co/9A6JGetlBZ
— ET NOW (@ETNOWlive) November 3, 2026
ಸದ್ಯ ಮೃತದೇಹವನ್ನು ಪ್ರಭು ಏರ್ ಹೆಲಿಕಾಪ್ಟರ್ ಮೂಲಕ ಲುಕ್ಲಾಕ್ಕೆ ತರಲಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಮೌಂಟೇನ್ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ. ಅವಘಡದಲ್ಲಿ ಫಿಶ್ಟೇಲ್ ಏರ್ ಹೆಲಿಕಾಪ್ಟರ್ನ ಪೈಲಟ್ಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಆಂಧ್ರಕ್ಕೆ ಅಪ್ಪಳಿಸಿದ `ಮುರಸು’ – 120 ಕಿ.ಮೀ ವೇಗದಲ್ಲಿ ಗಾಳಿ, ಭಾರೀ ಮಳೆ ಸಾಧ್ಯತೆ
