ಮೈಸೂರು: ರಾಜ್ಯಾದ್ಯಂತ ನಂದಿನಿ ಹಾಲು-ಮೊಸರಿನ ದರ ಏರಿಕೆ ವಿರುದ್ಧ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ (Protest) ನಡೆಸಿದ್ದಾರೆ.
ಮೈಸೂರಿನಲ್ಲಿ (Mysuru) ನಡೆದ ಮಂಜು ಮತ್ತು ಅನನ್ಯ ಅವರ ಮದುವೆಯಲ್ಲಿ ವಧು – ವರನಿಗೆ ಹಾಲು-ಮೊಸರು (Nandini Milk And Curd) ಉಡುಗೊರೆಯಾಗಿ ನೀಡಿ ಶುಭಕೋರಿದ್ದಾರೆ.
ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪ ವಿವಾಹ ನಡೆಯಿತು. ಬೆಲೆ ಏರಿಕೆಯಿಂದ ಬಡವರು ಹಾಗೂ ಮಧ್ಯಮ ವರ್ಗದ ಜನರ ಮೇಲಾಗುತ್ತಿರುವ ಆರ್ಥಿಕ ಹೊರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಕಾರ್ಯಕರ್ತರು ಒತ್ತಾಯಿಸಿದರು.


