ನವದೆಹಲಿ: ಕರ್ನಾಟಕ ಭವನದಲ್ಲಿ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕೈ ಸನ್ನೆ ಮಾಡಿ ವಂದೇ ಮಾತರಂ(Vande Mataram) ಪ್ರಸಾರವನ್ನು ನಿಲ್ಲಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿರುವ ಕರ್ನಾಟಕ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿದ್ದರಾಮಯ್ಯ(Siddaramaiah) ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಧ್ವಜಕ್ಕೆ ಗೌರವ ಸಲ್ಲಿಸಲು ‘ವಂದೇ ಮಾತರಂ’ ಗೀತೆಯನ್ನು ಧ್ವನಿವರ್ಧಕದಲ್ಲಿ ಪ್ರಸಾರ ಮಾಡಲಾಯಿತು.
ಕರ್ನಾಟಕ ಸರ್ಕಾರದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಮತ್ತು ಧ್ವಜಾರೋಹಣದ(Kannada Rajyotsava) ವೇಳೆ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಭವನದಲ್ಲಿ ಒಟ್ಟು 6 ಚರಣಗಳಿದ್ದ ಪೂರ್ಣ ಪ್ರಮಾಣದ ವಂದೇ ಮಾತರಂ ಹಾಡನ್ನು ಪ್ರಸಾರ ಮಾಡಲಾಯಿತು.
ಗೀತೆಯು 2 ಚರಣಗಳನ್ನು ದಾಟಿ ಮುಂದುವರಿದಾಗಲೂ ಅಧಿಕಾರಿಗಳು ಗಮನಿಸಲಿಲ್ಲ. ಹಾಡು ನಿಲ್ಲದೆ ಐದನೇ ಚರಣಕ್ಕೆ ಬರುತ್ತಿದ್ದಂತೆ ತಕ್ಷಣವೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿರ್ವಾಹಕರಿಗೆ ತಕ್ಷಣವೇ ಹಾಡನ್ನು ನಿಲ್ಲಿಸುವಂತೆ ಕೈಸನ್ನೆ ಮಾಡಿ ಸೂಚನೆ ನೀಡಿದರು.
ಸಿಎಂ ಸೂಚನೆ ನೀಡುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ಧ್ವನಿವರ್ಧಕದಲ್ಲಿ ಹಾಡನ್ನು ಸ್ಥಗಿತಗೊಳಿಸಿದರು. ಆ ಬಳಿಕ ಕಾರ್ಯಕ್ರಮ ಎಂದಿನಂತೆ ಮುಂದುವರಿಯಿತು.
ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ ಕೇವಲ ಮೊದಲ ಎರಡು ಚರಣಗಳನ್ನು (Stanzas) ಮಾತ್ರ ಹಾಡಲು ನಿರ್ಧರಿಸಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸೆಪ್ಟೆಂಬರ್ 2026 ರಲ್ಲಿ ಅಧಿಕೃತ ಆದೇಶ ಹೊರಡಿಸಿ, ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಕಡ್ಡಾಯಗೊಳಿಸಿದೆ.
ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಗಳು ಭಾಗವಹಿಸುವ ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಸಂಪೂರ್ಣ ಆರು ಚರಣಗಳ ಗೀತೆಯನ್ನು ಹಾಡಲಾಗುತ್ತದೆ, ಉಳಿದಂತೆ ಸಾಮಾನ್ಯ ಕಾರ್ಯಕ್ರಮಗಳಲ್ಲಿ ಎರಡು ಚರಣಗಳಿಗೆ ಸೀಮಿತಗೊಳಿಸಲಾಗಿದೆ.
