ಬೆಂಗಳೂರು: 2026ರ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ ಪ್ರಕಟ ಪ್ರಕಟವಾಗಿದ್ದು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅತ್ಯಾಚಾರ ಕೇಸ್ ತನಿಖಾಧಿಕಾರಿ ಪದಕಕ್ಕೆ ಭಾಜನರಾಗಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಇನ್ಸ್ಪೆಕ್ಟರ್ ಶೋಭಾ ಎನ್, ಎಎಸ್ಐ ರತ್ಮಮ್ಮ, ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣಗೆ ಪದಕ ಘೋಷಿಸಲಾಗಿದೆ. ಒಟ್ಟು ಕರ್ನಾಟಕದ ಆರು ಮಂದಿ ಪೊಲೀಸ್, ಓರ್ವ ಎಫ್ಎಸ್ಎಲ್ ಅಧಿಕಾರಿಗೆ ಕೇಂದ್ರ ಸರ್ಕಾರ ಪದಕ ಪ್ರಕಟಿಸಿದೆ. ಇದನ್ನೂ ಓದಿ: ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕ 2026 – ರಾಜ್ಯದ ಏಳು ಅಧಿಕಾರಿಗಳು/ಸಿಬ್ಬಂದಿಗೆ ಗೌರವ
ಯಾರ್ಯಾರಿಗೆ ಪದಕ?
ಹಲಸೂರು ಗೇಟ್ ಠಾಣೆಯ ಇನ್ಸ್ಪೆಕ್ಟರ್ ಎನ್.ಶೋಭಾ, ಬೆಳಗಾವಿ ಮಾಳಮಾರುತಿ ಠಾಣೆ ಇನ್ಪೆಕ್ಟರ್ ಬಾವುದ್ದೀನ್, ಡಿಜೆಪಿ ಕಚೇರಿಯ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್, ದೇವದುರ್ಗ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಕೆ.ರತ್ನಮ್ಮ, ಸಿಐಡಿಯ ಹೆಡ್ಕಾನ್ಸ್ಟೇಬಲ್ ವೈ.ಬಾಲಕೃಷ್ಣ, ಮೈಸೂರು ವಲಯದ ಉಪನಿರ್ದೇಶಕ ಡಾ.ಚಂದ್ರಶೇಖರ್.
