ಮೈಸೂರು: ಯೂಟ್ಯೂಬರ್ ಮಧು ಗೌಡ (Madhu Gowda) ಪತಿ ನಿಖಿಲ್ ರವೀಂದ್ರ ವಿರುದ್ಧ ಹಿಟ್ & ರನ್ (Hit And Run) ಆರೋಪ ಕೇಳಿಬಂದಿದ್ದು, ಎಫ್ಐಆರ್ ದಾಖಲಾಗಿದೆ.
ಮೈಸೂರಿನ (Mysuru) ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಿಟ್ & ರನ್ ನಡೆದ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ವಿ.ವಿ.ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಿಗ್ಬಾಸ್ ರೂಲ್ಸ್ ಬ್ರೇಕ್ – Expect The Unexpected ವಾರ್ನಿಂಗ್ ಕೊಟ್ಟ ಕಿಚ್ಚ
ಮಧು ಗೌಡ ಪತಿ ನಿಖಿಲ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಅಭಿಷೇಕ್ಗೆ ನಿಖಿಲ್ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಅಭಿಷೇಕ್ ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮೂಳೆ ಮುರಿತ ಉಂಟಾಗಿದೆ. ಗಾಯಗೊಂಡ ಅಭಿಷೇಕ್ 9 ತಿಂಗಳ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಅಪಘಾತ ಎಸಗಿದ ಬಳಿಕ ಕಾರು ನಿಲ್ಲಿಸದೆ ಅಥವಾ ಗಾಯಾಳುವಿನ ಯೋಗಕ್ಷೇಮ ವಿಚಾರಿಸದೇ ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿ, ಕಾರನ್ನು ಸೀಜ್ ಮಾಡಿದ್ದಾರೆ.ಇದನ್ನೂ ಓದಿ: ಪುತ್ರನ ಬರ್ತ್ಡೇಗೆ ಜೈಲಲ್ಲೇ ಸಿಗೋ ಚಾಕೋಲೇಟ್ ಕೊಟ್ಟು ವಿಶ್ ಮಾಡಿದ ದರ್ಶನ್
