ಬೆಂಗಳೂರು: ತನಿಖಾ ಕ್ಷೇತ್ರ ಮತ್ತು ವಿಧಿವಿಜ್ಞಾನ (FSL) ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕ ರಾಜ್ಯದ ಒಟ್ಟು ಏಳು ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2026ನೇ ಸಾಲಿನ ಪ್ರತಿಷ್ಠಿತ “ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕ” (Kendriya Grihmantri Dakshata Padak – 2026) ಲಭಿಸಿದೆ.
ತನಿಖಾ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಒಟ್ಟು ಆರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರು ನಗರದ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶೋಭ ಎನ್, ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಾವುದ್ದೀನ್ ರುಕ್ಷುದ್ದೀನ್ ಗಡೇಕರ್, ಬೆಂಗಳೂರಿನ ಪ್ರಧಾನ ಕಛೇರಿಯ ಪೊಲೀಸ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್, ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್, ಬೆಂಗಳೂರು ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ರತ್ನಮ್ಮ ಕೆ ಹಾಗೂ ಬೆಂಗಳೂರಿನ ಸಿಐಡಿ ಘಟಕದ ಸಿಹೆಚ್ಸಿ ಬಾಲಕೃಷ್ಣ ವೈ ಅವರು ತನಿಖಾ ವಿಭಾಗದ ಪದಕಕ್ಕೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಯಾವ್ದೇ ಭೌಗೋಳಿಕ ಮಿತಿಗಳಿಲ್ಲ, ಅಮೆರಿಕ ದಾಳಿ ಮಾಡಿದ್ರೆ ತಕ್ಷಣ ಪ್ರತಿಕ್ರಿಯೆ ಕೊಡಿ – ಇರಾನ್ ಸೇನೆಗೆ ಖಮೇನಿ ಆದೇಶ
‘Kendriya Grihmantri Dakshata Padak’ awarded to 490 personnel of various States/UTs/CAPFs/CPOs for the year 2026.
‘Kendriya Grihmantri Dakshata Padak’ recognizes excellent work, promotes high professional standards and boosts the morale of the concerned officials/officers.
Initiated under the leadership of PM Shri @narendramodi and guidance of UHM Shri @AmitShah, ‘Kendriya Grihmantri Dakshata Padak’ will boost the morale of all police personnel.
‘Kendriya Grihmantri Dakshata Padak’ is announced on 31st of October every year on the occasion of Birth Anniversary of Sardar Vallabhbhai Patel.
#RashtriyaEktaDiwas2026
@HMOIndia @PIB_India @DDNewslive @airnewsalerts
Press Release:
https://t.co/4vjxCAUYNX— PIB – Ministry of Home Affairs (@PIBHomeAffairs) October 31, 2026
ಇನ್ನು ವಿಧಿವಿಜ್ಞಾನ ವಿಭಾಗದಲ್ಲಿ ನೀಡಲಾಗುವ ದಕ್ಷತಾ ಪದಕಕ್ಕೆ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ (RFSL) ಉಪನಿರ್ದೇಶಕರಾದ ಡಾ. ಚಂದ್ರಶೇಖರ್ ಅವರು ಭಾಜನರಾಗಿದ್ದಾರೆ.
ತಮ್ಮ ಅತ್ಯುತ್ತಮ ಸೇವೆ, ದಕ್ಷತೆ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಕೇಂದ್ರ ಗೃಹ ಸಚಿವಾಲಯದಿಂದ ಈ ಪದಕಗಳನ್ನು ಪ್ರಕಟಿಸಲಾಗಿದೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಉತ್ತರಾಖಂಡ ದುರಂತ – ನಾಳೆ ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿಗೆ ಮೃತದೇಹ ರವಾನೆ ಸಾಧ್ಯತೆ
