ಟೆಹ್ರಾನ್: ಅಮೆರಿಕ ದಾಳಿ (US Attack) ಮಾಡಿದ್ರೆ ತಕ್ಷಣವೇ ಪ್ರತಿಕ್ರಿಯೆ ಕೊಡಿ, ಎಲ್ಲಿ ದಾಳಿ ಮಾಡಬೇಕು ಅನ್ನೋದಕ್ಕೆ ಯಾವುದೇ ಪ್ರತಿಕ್ರಿಯೆಗಳಿಲ್ಲ ಎಂದು ಇರಾನ್ ಸೇನೆಗೆ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಆದೇಶ ಹೊರಡಿಸಿದ್ದಾರೆ.
ಇರಾನ್ vs ಅಮೆರಿಕ – ಇಸ್ರೇಲ್ (Iran vs US- Israel) ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಿನಲ್ಲೇ ಈ ಸಂದೇಶ ಹೊರಬಂದಿದೆ. ಯಾವುದೇ ಹೊಸ ಬೆದರಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿ ಎಂದು ಸೂಚಿಸಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ಸಂಘರ್ಷ ಯುದ್ಧಕ್ಕೆ ತಿರುಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಇರಾನ್ ಸಶಸ್ತ್ರ ಪಡೆಗಳ ಹಿರಿಯ ಕಮಾಂಡರ್ಗಳೊಂದಿಗೆ ನಡೆಸಿದ ಸಭೆಯಲ್ಲಿ ಖಮೇನಿ ಈ ಆದೇಶ ನೀಡಿದ್ದಾರೆ. ಯಾವುದೇ ಸಂಭಾವ್ಯ ಶತ್ರು ಬೆದರಿಕೆಗೆ ತಕ್ಷಣದ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ಕೊಡಿ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನ ಅವರ ಅಧಿಕೃತ ಟೆಲಿಗ್ರಾಮ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (ಕ್ರಾಂತಿಕಾರಿ ಪಡೆಗಳು), ಹಾರ್ಮುಜ್ ಜಲಸಂಧಿಯಲ್ಲಿ 4 ತೈಲ ಟ್ಯಾಂಕರ್ಗಳಿಗೆ ಬೆಂಕಿ ಹೊತ್ತಿಕೊಂಡಿದ್ದಾಗಿ ತಿಳಿಸಿದ್ದವು. ಈ ಹಡಗುಗಳು ಅನಧಿಕೃತ ಮಾರ್ಗಗಳನ್ನ ಬಳಸಿದ್ದವು ಎಂದೂ ಆರೋಪಿಸಿದ್ದವು.
ಬಿಕ್ಕಟ್ಟು ಏರ್ಪಟ್ಟಿದ್ದು ಹೇಗೆ?
ಇದೇ ವರ್ಷ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ನ ಮಿಲಿಟರಿ ಮತ್ತು ಪರಮಾಣು ಸಂಬಂಧಿತ ಮೂಲ ಸೌಕರ್ಯಗಳನ್ನ ಗುರಿಯಾಗಿಸಿ ದಾಳಿ ನಡೆಸಿದ್ದವು. ಇದೇ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಹತ್ಯೆಗೀಡಾದರು. ನಂತರ ಅವರ ಪುತ್ರ ಮೊಜ್ತಬಾ ಖಮೇನಿ ಇರಾನ್ನ ಹೊಸ ಸರ್ವೋಚ್ಚ ನಾಯಕರಾದರು. ಅಂದಿನಿಂದಲೂ ಇರಾನ್ – ಇಸ್ರೇಲ್ ಮತ್ತು ಅಮೆರಿಕ ನಡುವೆ ಸಂಘರ್ಷ ಮುಂದುವರಿಯುತ್ತಲೇ ಬಂದಿದೆ.

