ಪುಣೆ: 33 ವರ್ಷದ ಮಹಿಳೆಯೊಬ್ಬರು ತಮ್ಮ ಆರು ವರ್ಷದ ಮಗನೊಂದಿಗೆ ವಸತಿ ಕಟ್ಟಡದ 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಪಿಂಪ್ರಿ-ಚಿಂಚ್ವಾಡ್ನಲ್ಲಿ (Pimpri-Chinchwad) ನಡೆದಿದೆ.
ಮೃತ ಮಹಿಳೆಯನ್ನು ಏಕ್ತಾ ಬಂಗಾಡ್ (33) ಎಂದು ಗುರುತಿಸಲಾಗಿದೆ. ಅವರ ಆರು ವರ್ಷದ ಮಗ ಮಾಧವ್ ಕೂಡ ಮೃತಪಟ್ಟಿದ್ದಾನೆ. ಶುಕ್ರವಾರ ಸಂಜೆ ಸುಮಾರು 6:30ರ ವೇಳೆಗೆ ಪಿಂಪ್ರಿ-ಚಿಂಚ್ವಾಡ್ನ ಸಿಗ್ನೇಚರ್ ಪಾರ್ಕ್ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಏಕ್ತಾ ಅವರು ಪತಿ ಮನೋಜ್ ಬಂಗಾಡ್ ಮತ್ತು ಮಗನೊಂದಿಗೆ ವಾಸವಾಗಿದ್ದರು. ಮನೋಜ್ ಪುಣೆಯ ಐಟಿ ಕಂಪನಿಯೊದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಧಿ ಇಲ್ಲದೇ ಹಾಲಿನ ದರ ಹೆಚ್ಚಿಸಬೇಕಾಯಿತು – ಡಿಕೆಶಿ
ಪ್ರಾಥಮಿಕ ಮಾಹಿತಿಯ ಪ್ರಕಾರ, ಏಕ್ತಾ ತಮ್ಮ ಮಗನನ್ನು ಕಟ್ಟಡದ 18ನೇ ಮಹಡಿಯ ಕಾರಿಡಾರ್ಗೆ ಕರೆದೊಯ್ದು ಅಲ್ಲಿಂದ ಕೆಳಗೆ ಜಿಗಿದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ.
ಪತಿಗೆ ಮರುಮದುವೆಯಾಗುವಂತೆ ಪತ್ರ:
ಈ ಪ್ರಕರಣದಲ್ಲಿ ಪೊಲೀಸರಿಗೆ ದೊರೆತಿರುವ 7ರಿಂದ 8 ಪುಟಗಳ ಪತ್ರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾವಿಗೂ ಮುನ್ನ ಏಕ್ತಾ ಬರೆದಿದ್ದಾರೆ ಎನ್ನಲಾದ ಈ ಪತ್ರದಲ್ಲಿ ಪತಿಯ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ಶೂ ಕಾರ್ಖಾನೆಯಲ್ಲಿ ಅಗ್ನಿ ಅವಘಡ – ನಾಲ್ವರು ದುರ್ಮರಣ
ತಮ್ಮ ಸಾವಿನ ಬಳಿಕ ಪತಿ ಮತ್ತೊಂದು ಮದುವೆಯಾಗಿ ಹೊಸ ಜೀವನ ಆರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಮಗನ ಭವಿಷ್ಯದ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ತಾಯಿ ಇಲ್ಲದಿರುವುದನ್ನು ಮಗ ಅರ್ಥಮಾಡಿಕೊಳ್ಳಲು ಕಷ್ಟಪಡಬಹುದು. ಮುಂದೆ ಆತ ಪದೇಪದೇ ತಾಯಿಯ ಬಗ್ಗೆ ಪ್ರಶ್ನಿಸಬಹುದು ಎಂಬ ಆತಂಕವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮಗನಿದ್ದರೆ ಪತಿಗೆ ಮರುಮದುವೆಯಾಗಲು ತೊಂದರೆಯಾಗಬಹುದು ಎಂಬ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದ ಚಿನ್ನ ಕಳ್ಳ ಸಾಗಣೆ ಆರೋಪಿ ರನ್ಯಾ ರಾವ್
ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ:
ಏಕ್ತಾ ಅವರು ಕಳೆದ ಹಲವು ವರ್ಷಗಳಿಂದ ಬೆನ್ನುಮೂಳೆಗೆ ಸಂಬಧಿಸಿದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ, ಕಾಯಿಲೆಯ ಬಗ್ಗೆ ಸ್ಪಷ್ಟವಾದ ರೋಗನಿರ್ಣಯವಾಗಿರಲಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ದೀರ್ಘಕಾಲದ ಆರೋಗ್ಯ ಸಮಸ್ಯೆ ಹಾಗೂ ಅದರಿಂದ ಎದುರಾದ ಸಂಕಷ್ಟಗಳ ಬಗ್ಗೆಯೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಗೆ ನುಗ್ಗಿ ಮರ ಕಡಿಯುವ ಯಂತ್ರದಿಂದ ದಾಳಿ – 10ನೇ ತರಗತಿ ವಿದ್ಯಾರ್ಥಿನಿ ಸಾವು
ವಾಕಡ್ ಪೊಲೀಸರಿಂದ ತನಿಖೆ:
ಘಟನೆ ನಡೆದ ಬೆನ್ನಲ್ಲೇ ವಾಕಡ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮನೆಯಲ್ಲಿ ಪತ್ತೆಯಾದ ಪತ್ರವನ್ನು ವಶಕ್ಕೆ ಪಡೆದು ಅದರಲ್ಲಿರುವ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಕಾಡಿಗೆ SIT ಎಂಟ್ರಿ – ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಭೇಟಿ
