ಬೆಂಗಳೂರು: ಅನಿವಾರ್ಯವಾಗಿ ವಿಧಿ ಇಲ್ಲದೇ ಹಾಲಿನ ದರ ಹೆಚ್ಚಿಸಬೇಕಾಯ್ತು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದರು.
ಹಾಲಿನ ದರ ಏರಿಕೆಗೆ ಜನಸಾಮಾನ್ಯರ ವಿರೋಧ ವ್ಯಕ್ತವಾಗ್ತಿರುವ ಹಿನ್ನೆಲೆ ಮಾತಾಡಿದ ಸಿಎಂ ಡಿಕೆಶಿ, ಹಾಲು ಒಕ್ಕೂಟಗಳು 12 ರೂಪಾಯಿ ಕೇಳಿದ್ದರು. ಪಕ್ಕದ ರಾಜ್ಯಗಳಲ್ಲೂ ಹಾಲಿನ ದರ ಜಾಸ್ತಿ ಇದೆ. ಹಾಗಾಗಿ ಇಲ್ಲಿಂದ ಹಾಲು ಅಲ್ಲಿಗೆ ಹೋಗ್ತಿತ್ತು. ಬರಗಾಲದ ಕಾರಣ ಹಾಲು ಉತ್ಪಾದನೆ ಕೂಡ ಕಡಿಮೆ ಆಗುತ್ತಿದೆ. ಅದಕ್ಕೆ ಬೇರೆ ವಿಧಿನೇ ಇಲ್ಲದೇ ದರ ಹೆಚ್ಚಿಸಬೇಕಾಯ್ತು ಎಂದು ಹೇಳಿದರು.
ಗೋವುಗಳ ರಕ್ಷಣೆ ಮಾಡಬೇಕಾದರೆ ಗೋವುಗಳಿಗೆ ಒಳ್ಳೆಯದು ಮಾಡಬೇಕು. ಮೇವು ಕೊಡಬೇಕು, ಊಟ ಕೊಡಬೇಕು. ಮೇವು ಕೊಡಬೇಕಾದರೆ ರೈತ ಚೆನ್ನಾಗಿ ಇರಬೇಕು, ರೈತರ ಹತ್ರ ಹಣ ಇರಬೇಕು. ರೈತರ ಬಳಿ ಹಣ ಇಲ್ಲ ಅಂದ್ರೆ ಗೋವುಗಳಿಗೆ ಮೇವು ಕಡಿಮೆ ಮಾಡ್ತಾರೆ. ಗೋ ಮಾತೆಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ತಿಳಿಸಿದ್ರು.
ಬರಗಾಲದಲ್ಲಿ ಗೋಮಾತೆಯನ್ನ ಉಳಿಸಬೇಕು. ಆ ದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡಲಾಗಿದೆ. ಬಹಳ ವರ್ಷಗಳಿಂದ ಮಾಡಿರಲಿಲ್ಲ ಹಾಗಾಗಿ ಮಾಡಲಾಗಿದೆ. ಮೊಸರು ದರ ಒಕ್ಕೂಟಗಳಿಗೆ ಬಿಟ್ಟಿದ್ದು. ಆದ್ರೆ ಹಾಲಿನ ದರ ರೈತರಿಗಾಗಿ ನಾವು ಏರಿಸಿದ್ದೇವೆ ಅಂತ ಇದೇ ವೇಳೆ ಸಿಎಂ ತಿಳಿಸಿದ್ರು.

