– ಆರೋಪಿಗೆ ಪ್ರೊಟೋಕಾಲ್ ದರ್ಶನ ಕೊಟ್ಟಿದ್ದಕ್ಕೆ ವ್ಯಾಪಕ ಟೀಕೆ
ಹಾಸನ: ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿಯಾಗಿರುವ ನಟಿ ರನ್ಯಾ ರಾವ್ (Ranya Rao) ಅವರು ಹಾಸನಾಂಬೆ (Hasanamba Temple) ದರ್ಶನ ಪಡೆದಿದ್ದಾರೆ.
ತಂದೆ ನಿವೃತ್ತ ಡಿಜಿಪಿ ರಾಮಚಂದ್ರರಾವ್ ಹಾಗೂ ಕುಟುಂಬದವರ ಜೊತೆ ಆಗಮಿಸಿ ರನ್ಯಾ ರಾವ್, ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿ, ಪ್ರೊಟೋಕಾಲ್ ವಾಹನದಲ್ಲಿ ಆಗಮಿಸಿ ದೇವಿ ದರ್ಶನ ಮಾಡಿದ್ದಾರೆ.
ಆರೋಪಿಗೆ ಪ್ರೊಟೋಕಾಲ್ ದರ್ಶನ ಕೊಟ್ಟಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
