ವಿಜಯಪುರ: ಕಬ್ಬು ಪ್ರತಿ ಟನ್ಗೆ 5,500 ರೂ. ದರ ನಿಗದಿಗಾಗಿ ರೈತರ ಹೋರಾಟ ನಡೆದಿದೆ. ಇದರ ಹಿನ್ನೆಲೆಯಲ್ಲಿ ಕಬ್ಬು ದರ ನಿಗದಿ ಆಗುವವರೆಗೆ ಕಾರ್ಖಾನೆ ಆರಂಭಿಸದಂತೆ ರೈತರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಗೋದಾಮು ಬಂದ್ ಮಾಡಿದ ರೈತರು ಅಕ್ರೋಶ ಹೊರಹಾಕಿದ್ದಾರೆ. ಇನ್ನು ಸಕ್ಕರೆ ಕಾರ್ಖಾನೆಗಳ ಸಕ್ಕರೆ ಗೋದಾಮು ಬಂದ್ ಮಾಡಿ ನಮಗೆ ನ್ಯಾಯ ಸಿಗೋವರೆಗೆ ಸಕ್ಕರೆ ಹೊರಗೆ ಹೋಗೋ ಹಾಗಿಲ್ಲ ಅಂತಾ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇಂದು ಪಿಎಂ ಕಿಸಾನ್ ಯೋಜನೆಯ 24ನೇ ಕಂತು ಬಿಡುಗಡೆ
ವಿಜಯಪುರ (Vijayapura) ಜಿಲ್ಲೆಯ 10 ಸಕ್ಕರೆ ಕಾರ್ಖಾನೆಗೆ ರೈತರು ಬೀಗ ಜಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚೂನಪ್ಪ ಪೂಜಾರಿ ಬಣದ ರೈತರಿಂದ ಈ ಹೋರಾಟ ಮಾಡಲಾಗಿದೆ.
ರೈತರ ಬೇಡಿಕೆ ಈಡೇರಿಸುವವರೆಗೂ ಕಾರ್ಖಾನೆ ಪ್ರಾರಂಭ ಮಾಡಬಾರದು ಹಾಗೂ ಸಕ್ಕರೆ ಮಾರಾಟ ಮಾಡಬಾರದೆಂದು ರೈತರ ಆಗ್ರಹಿಸಿದ್ದಾರೆ. ಇದಕ್ಕೆ ಕಾರ್ಖಾನೆ ಮಾಲೀಕರು ಸಹಕಾರ ನೀಡಿದ್ದಾರೆ. ಆದಷ್ಟು ಬೇಗ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
