– ಆನ್ಲೈನ್ ಟಿಕೆಟ್ನಿಂದ 1 ಕೋಟಿ ರೂ. ಆದಾಯ
ಹಾಸನ: ಹಾಸನಾಂಬೆ ಜಾತ್ರೆಯ (Hasanamba Jatre) ಮೊದಲ ದಿನವೇ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಜಾತ್ರೆಯ ಮೊದಲ ದಿನ ಈ ಪ್ರಮಾಣದ ಭಕ್ತರು ಆಗಮಿಸಿದ್ದಾರೆ.
ಭಕ್ತಸಾಗರ ಕಂಡು ಪ್ರತಿಕ್ರಿಯಿಸಿರುವ ಸಚಿವ ಕೆ.ಎಂ ಶಿವಲಿಂಗೇಗೌಡ (K.M Shivalingegowda), ಇದು ದೇವಿಯ ಪವಾಡ ಎಂದಿದ್ದಾರೆ. ನಾನು ಹತ್ತು ದಿನವೂ ಇಲ್ಲಿಯೇ ಇರುತ್ತೇನೆ. ಎಷ್ಟೇ ಭಕ್ತರು ಬಂದರೂ ಅವರಿಗೆ ಸುಗಮ ದರ್ಶನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 60 ರೂ.ಗೆ 2 ಲಾಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್: ಶಿವಲಿಂಗೇಗೌಡ ಗರಂ
ಮುಂಜಾನೆಯಿಂದಲೇ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಸರತಿ ಸಾಲನ್ನು ಸಚಿವರು ಪರಿಶೀಲಿಸಿದ್ದಾರೆ. ಆನ್ಲೈನ್ ಮೂಲಕ 1000 ರೂ. 300 ರೂ. ವಿಶೇಷ ದರ್ಶನದ ಟೆಕೆಟ್ಗಳಿಂದ ಒಂದು ಕೋಟಿ ಆದಾಯ ಬಂದಿದೆ. ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿ ದೇವಿ ದರ್ಶನ ಮಾಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಸ್ಥಳದಲ್ಲಿ ಎಸ್ಪಿ ಶುಭನ್ವಿತಾ ಅವರು ಮೊಕ್ಕಾಂ ಹೂಡಿದ್ದಾರೆ. ಧರ್ಮ ದರ್ಶನ, 1000 ರೂ. 300 ರೂ. ನ ವಿಶೇಷ ದರ್ಶನದ ಸಾಲುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ನೂಕುನುಗ್ಗಲು ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ – ಎರಡು ಕಿಮೀ ಸಾಲುಗಟ್ಟಿ ನಿಂತ ಜನ!
