ಶಿವಮೊಗ್ಗ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕಾರಿಪುರ (Shikaripura) ಠಾಣೆಯ ಹೆಡ್ ಕಾನ್ಸ್ಟೇಬಲ್ (Head Constable) ಚಿಕಿತ್ಸೆ ಫಲಿಸದೆ ಉಡುಪಿಯ (Udupi) ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಶಿಕಾರಿಪುರದ (Shikaripur) ಸಾಲೂರು ಗ್ರಾಮದ ನಿವಾಸಿ ಗಿರೀಶ್ ಕುಮಾರ್ (33) ಮೃತ ದುರ್ದೈವಿ. ಚಿಕ್ಕಾಪುರ ಕ್ರಾಸ್ ಬಳಿ 2 ವಾರಗಳ ಹಿಂದೆ ನಡೆದಿದ್ದ ಬೈಕ್ ಅಪಘಾತದಲ್ಲಿ (Accident) ಅವರು ಗಂಭಿರವಾಗಿ ಗಾಯಗೊಂಡಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಬಂದಿರಲಿಲ್ಲ – ಉಲ್ಟಾ ಹೊಡೆದ ಐ ವಿಟ್ನೆಸ್ ಪುನೀತ್
ಜಿಲ್ಲಾ ಪೊಲೀಸ್ ಇಲಾಖೆ & ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಇಸ್ರೇಲ್ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಾಪತ್ತೆ
