ಮಂಗಳೂರು/ಟೆಲ್ ಅವೀವ್: ಇಸ್ರೇಲ್ನಲ್ಲಿ (Israel) ಮಂಗಳೂರು (Mangaluru) ಮೂಲದ ವ್ಯಕ್ತಿಯೊಬ್ಬರು ಕಳೆದ ಹನ್ನೊಂದು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ನಾಪತ್ತೆಯಾದ ವ್ಯಕ್ತಿ. ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅ.16ರ ಬಳಿಕ ಮನೆಯವರ ಸಂಪರ್ಕಕ್ಕೆ ಶಡ್ರಕ್ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇಸ್ರೇಲ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ – ನೆತನ್ಯಾಹು ಸಿಗದ ಬೆಂಬಲ, ಅರಬ್ ಪಕ್ಷಗಳೇ ಕಿಂಗ್ ಮೇಕರ್
ಇಸ್ರೇಲ್ನ ರಾಜಧಾನಿ ಟೆಲ್ ಅವೀವ್ನಲ್ಲಿ ಕಂಪನಿಯೊಂದರಲ್ಲಿ ಶಡ್ರಕ್ ಕೆಲಸಕ್ಕಿದ್ದರು. ಬಳಿಕ ಇಸ್ರೇಲ್ನ ನಝರೆತ್ನ ನೊಫ್ ಹಗಲಿಲ್ನಲ್ಲಿ ಯುಸಿಟಿ ಲಿಕ್ವಿಡ್ ಸೊಲ್ಯೂಶನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅ.16 ರಂದು ರಾತ್ರಿ 8:49ಕ್ಕೆ ಪತ್ನಿಗೆ ಮೆಸೇಜ್ ಕಳುಹಿಸಿದ್ದರು. ಇದಕ್ಕೂ ಮೊದಲು ಮನೆಯವರೊಂದಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದರು. ಬಳಿಕ ಈವರೆಗೆ ಕುಟುಂಬಸ್ಥರ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ.
ಮೊಬೈಲ್ ಸಂಪರ್ಕಕ್ಕೆ ಸಿಗದ ಹಿನ್ನೆಲೆ, ಅ.21ರಂದು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಈ-ಮೇಲ್ ಮೂಲಕ ಕುಟುಂಬಸ್ಥರು ದೂರು ನೀಡಿದ್ದರು. ಬಳಿಕ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರನ್ನು ಕುಟುಂಬಸ್ಥರು ಭೇಟಿಯಾಗಿ ಸಹಾಯ ಕೋರಿದ್ದರು. ಬಳಿಕ ಅವರ ನಾಪತ್ತೆ ಬಗ್ಗೆ ಮಂಗಳೂರಿನ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ. ಇದನ್ನೂ ಓದಿ: ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆ – ದೀಪ ಬೆಳಗಿಸಲು ಪ್ರಧಾನಿ ಮೋದಿ, ಸ್ಮಿತ್ ಮಚ್ಚಾರ್ಗೆ ನೆತನ್ಯಾಹು ಆಹ್ವಾನ!
