ಲಾಸ್ ಏಂಜಲೀಸ್ನಲ್ಲಿ ನಿತೇಶ್ ತಿವಾರಿ ನಿರ್ಮಾಣದ (Ramayana) ʻರಾಮಾಯಣ: ರೈಸ್ ಆಫ್ ಎ ಲೆಜೆಂಡ್ʼ ಪ್ರೀಮಿಯರ್ ಶೋನಲ್ಲಿ ಸ್ಟೈಲಿಶ್ ಲುಕ್ ಮೂಲಕ ಯಶ್ (Racking Star Yash) ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಅವರ ಕೋಟ್ ಮೇಲೆ ಧರಿಸಿದ್ದ ಚಿನ್ನದ ಬ್ರೂಚ್ ಎಲ್ಲರ ಗಮನ ಸೆಳೆದಿದ್ದು ಸೋಷಿಯಲ್ ಮೀಡಿಯಾದಲ್ಲಿ (Viral Golden Brooch) ಭಾರಿ ವೈರಲ್ ಆಗುತ್ತಿದೆ.
ಗೋಲ್ಡನ್ ಬ್ರೂಚ್ (Golden Brooch) ಎನ್ನುವುದು ಸಾಂಪ್ರದಾಯಿಕ ಮತ್ತು ಆಧುನಿಕ ಉಡುಪುಗಳ ಅಂದವನ್ನು ಹೆಚ್ಚಿಸಲು ಬಳಸುವ ಒಂದು ಆಕರ್ಷಕ ಆಭರಣವಾಗಿದೆ. ಇದನ್ನು ಸೀರೆಗಳು, ಬ್ಲೇಜರ್ಗಳು, ಶೇರ್ವಾನಿ ಹಾಗೂ ದುಪಟ್ಟಾಗಳಿಗೆ ಪಿನ್ ಮಾಡಲು ಬಳಸಲಾಗುತ್ತದೆ.

ಮಹಾಕಾವ್ಯ ರಾಮಾಯಣದಲ್ಲಿ ಲಂಕಾಧೀಶ ರಾವಣನ ಪಾತ್ರವನ್ನು ನಿರ್ವಹಿಸಿದ ರಾಕಿಂಗ್ಸ್ಟಾರ್ ಯಶ್, ಪ್ರೀಮಿಯರ್ ಶೋನಲ್ಲೂ ತಮ್ಮ ಪಾತ್ರವನ್ನು ತಮ್ಮ ಉಡುಗೆ ಮೂಲಕ ಪ್ರತಿನಿಧಿಸಿದ್ದಾರೆ. ತಮ್ಮ ಪ್ರೀತಿಯ ಪತ್ನಿ ರಾಧಿಕಾ ಜೊತೆ ಕಾಣಿಸಿಕೊಂಡ ಯಶ್, ಇಡೀ ಶೋನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು.
ಇನ್ನು ಅಮೆರಿಕದ ಲಾಸ್ ಎಂಜಲೀಸ್ನಲ್ಲಿ ನಡೆದ ʼರಾಮಾಯಣʼ ಸಿನಿಮಾದ ಪ್ರಥಮ ಪ್ರದರ್ಶನದಲ್ಲಿ ಚಿತ್ರತಂಡ ಭಾಗಿಯಾಗಿತ್ತು. ಆದರೆ, ಅಲ್ಲಿ ಯಶ್ ನೋಡಲು ಬಂದ ಅಭಿಮಾನಿಗಳೇ ಹೆಚ್ಚಾಗಿದ್ದರು.
ಥಿಯೇಟರ್ಗೆ ಆಗಮಿಸಿದ ಯಶ್, ಬ್ಲ್ಯಾಕ್ ಔಟ್ಫಿಟ್ನಲ್ಲಿ ಧರಿಸಿದ್ದರು. ಆದರೆ, ಸ್ಟೈಲಿಶ್ ಆಗಿ ಕಾಣುತ್ತಿದ್ದ ಯಶ್ ಅವರ ಉಡುಗೆಯಲ್ಲಿ ವಿಶೇಷವಾಗಿ ಕಣ್ಮನ ಸೆಳೆದಿದ್ದು ಅವರು ಧರಿಸಿದ್ದ ʼಗೋಲ್ಡನ್ ಬ್ರೂಚ್ʼ ಯಶ್ ಜಾಕೆಟ್ಗೆ ಪಿನ್ ಮಾಡಲಾದ ಬ್ರೂಚ್, ಅದೂ ಕೂಡ ದಶಮುಖ ರಾವಣನ ಮುಖವಿರುವ ಈ ಬ್ರೂಚ್. ಅವರ ಬ್ಲ್ಯಾಕ್ ಔಟ್ಫಿಟ್ಗೆ ರಾಯಲ್ ಲುಕ್ ನೀಡುವಂತಿತ್ತು. ಈ ವಿಶೇಷ ಔಟ್ಫಿಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಇದನ್ನೂ ಓದಿ: ಅರಮನೆ, ಅಂಬಾರಿ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ, ಕ್ಷಮೆ ಕೇಳುವ ಪ್ರಮೇಯವೇ ಇಲ್ಲ – ಯತೀಂದ್ರ
ರೆಡ್ ಕಾರ್ಪೆಟ್ ಮೇಲೆ ಯಶ್ ಜೊತೆ ಪ್ರಮುಖ ನಟರಾದ – ರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಮತ್ತು ಸೀತಾ ದೇವಿಯ ಪಾತ್ರದಲ್ಲಿರುವ ಸಾಯಿ ಪಲ್ಲವಿ – ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಇದ್ದರು. ಯಶ್ ಅವರ ಪತ್ನಿ-ನಟಿ ರಾಧಿಕಾ ಪಂಡಿತ್ ಕೂಡ ಇದ್ದರು.ಇದನ್ನೂ ಓದಿ: ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ: ಸಿದ್ದರಾಮಯ್ಯ
