– ‘ಶೆಟ್ಟಿ ಡಾನ್’ ಸ್ವಯಂವರಕ್ಕೆ ಬಂದ್ರಾ ರಕ್ಷಿತಾ ಶೆಟ್ಟಿ?
ಬಿಗ್ ಬಾಸ್ (Bigg Boss) ಮನೆಯಲ್ಲಿ ಸೌಂದರ್ಯ ಶೆಟ್ಟಿ (Soundarya Shetty) ಸ್ವಯಂವರ ನಡೆಯುತ್ತಿದೆ. ದೊಡ್ಮನೆ ಕ್ಯಾಪ್ಟನ್ ಆಗಿರೋ ‘ಶೆಟ್ಟಿ ಡಾನ್’ ಮದುವೆಯಾಗಲು ವರನನ್ನು ಆಯ್ಕೆ ಮಾಡಬೇಕಿದೆ. ಸ್ವಯಂವರ ಸಮಾರಂಭಕ್ಕೆ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯೊಬ್ಬರ ಆಗಮನ ಅಚ್ಚರಿ ಮೂಡಿಸಿದೆ.
ಹೌದು, ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ಆಗಿರುವ ಮಂಗಳೂರಿನ ರಕ್ಷಿತಾ ಶೆಟ್ಟಿ (Rakshita Shetty) ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ `ಶೆಟ್ಟಿ ಡಾನ್’ ಸ್ವಯಂವರ – ವಧು ಸೌಂದರ್ಯಗೆ ವರನಾಗಲು ಹುಡುಗರ ಕಸರತ್ತು
ಶೆಟ್ಟಿ ಡಾನ್ ಸ್ವಯಂವರದಲ್ಲಿ ಗಗನ್-ಯಶಸ್ ವರರಾಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ಅವರು ಪ್ರಶಾಂತಿಯಾಗಿ (ಅಮ್ಮ), ತಾಂಡವ್ ಇಬ್ಬರೂ ಸೌಂದರ್ಯ ಪೋಷಕರಾಗಿದ್ದಾರೆ. ಸಂಬಂಧ ಬೆಸೆಯುವ ಮಾತುಕತೆ ನಡೆಯುತ್ತಿದೆ. ಈ ಹೊತ್ತಲ್ಲೇ ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿಯಾಗಿದೆ.
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/ty9DZ4yE8Y
— Colors Kannada (@ColorsKannada) October 28, 2026
ಪ್ರಶಾಂತಿ ಎಂಬಿಎ ಓದಲು ಮಲೇಷ್ಯಾಗೆ ಹೋಗಿದ್ದಾಗ ಅವರಿಗೊಂದು ಲವ್ ಆಗಿತ್ತು. ಆ ಪ್ರೇಮದ ಪರಿಣಾಮವೇ ರಕ್ಷಿತಾ ಶೆಟ್ಟಿ ಎಂದು ಪರಿಚಯಿಸಲಾಗಿದೆ. ಕರಾವಳಿ ಕುವರಿ ಎಂಟ್ರಿ ಮನೆಮಂದಿಗೆ ಖುಷಿಕೊಟ್ಟಿದೆ. ಈ ಟಾಸ್ಕ್ ಮುಗಿಯೋವರೆಗೂ ರಕ್ಷಿತಾ ದೊಡ್ಮನೆಯಲ್ಲಿ ಇರುವ ಸಾಧ್ಯತೆ ಇದೆ. ಇದನ್ನೂ ಓದಿ: ಅನಿರುದ್ಧ್-ಕಾವ್ಯಾ ಆರತಕ್ಷತೆ ಆಹ್ವಾನ ಪತ್ರಿಕೆ ವೈರಲ್; ಮೋದಿ, ವಿಜಯ್ಗೆ ರಾಯಲ್ ಇನ್ವಿಟೇಷನ್
ಕಳೆದ ಸೀಸನ್ನಲ್ಲಿ ಮುಗ್ಧತೆ, ವ್ಯಕ್ತಿತ್ವ ಮತ್ತು ಚಾಣಾಕ್ಷತನದ ಆಟದಿಂದಲೇ ರಕ್ಷಿತಾ ಗಮನ ಸೆಳೆದು ರನ್ನರ್ ಅಪ್ ಆಗಿದ್ದರು.
