ಹಾಸನ: ಟೈಯರ್ ಬ್ಲಾಸ್ಟ್ ಆಗಿ ಸಿಮೆಂಟ್ ತುಂಬಿದ್ದ ಟ್ರಕ್ ಪಲ್ಟಿಯಾದ ಘಟನೆ ಸಕಲೇಶಪುರದ (Sakleshpura) ಗುಳಗಳಲೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಅಪಘಾತದಿಂದ (Accident) ಜಾರ್ಖಂಡ್ ಮೂಲದ ಲಾರಿ ಚಾಲಕ ರಾಜೇಶ್ ಯಾದವ್ಗೆ (30) ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ನಡುವೆ ರಸ್ತೆ ಮೇಲೆ ಬಿದ್ದಿದ್ದ ನೂರಾರು ಸಿಮೆಂಟ್ ಚೀಲಗಳನ್ನು ಅಪರಿಚಿತರು ಹೊತ್ತೊಯ್ದಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಹತ್ತಾರು ಮಂದಿ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಮಿಳುನಾಡಿನ ಜೈಲಿನಿಂದ 17 ಖೈದಿಗಳು ಪರಾರಿ – ಓರ್ವ ಅರೆಸ್ಟ್
ಅಪಘಾತದ ಬಳಿಕ ಲಾರಿಯನ್ನು ಪೊಲೀಸರು ತೆರವುಗೊಳಿಸಿದ್ದರು. ಅಪಘಾತ ನಡೆದು ಒಂದು ದಿನ ಕಳೆದರೂ ಸಿಮೆಂಟ್ ಮೂಟೆಗಳನ್ನು ತೆಗೆದುಕೊಂಡು ಹೋಗಲು ಯಾರು ಬಾರದ ಹಿನ್ನಲೆ, ರಾತ್ರೋರಾತ್ರಿ ಸಿಮೆಂಟ್ ಚೀಲಗಳನ್ನು ಅಪರಿಚಿತರು ಕದ್ದಿದ್ದಾರೆ.
ಲಾರಿ ಬೆಂಗಳೂರಿನಿಂದ ಮಂಗಳೂರಿಗೆ ಸಿಮೆಂಟ್ ತುಂಬಿಕೊಂಡು ತೆರಳುತ್ತಿತ್ತು. ಈ ವೇಳೆ, ಟೈಯರ್ ಬ್ಲಾಸ್ಟ್ ಆಗಿ, ಟ್ರಕ್ ಪಲ್ಟಿಯಾಗಿತ್ತು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇದನ್ನೂ ಓದಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು
