ಹೈದರಾಬಾದ್: ವ್ಯಕ್ತಿಯೊಬ್ಬ ಮ್ಯಾನ್ಮಾರ್ (Myanmar) ಮೂಲದ ತನ್ನ ಪತ್ನಿಯನ್ನು (Wife) ಮನೆಯೊಳಗೆ ಕೂಡಿಹಾಕಿ, ಆಕೆಯ ಮೇಲೆ ತನ್ನ ಮೂವರು ಸ್ನೇಹಿತರಿಂದ ಅತ್ಯಾಚಾರ ಮಾಡಿಸುತ್ತಿದ್ದ ಅಮಾನವೀಯ ಪ್ರಕರಣ ಹೈದರಾಬಾದ್ನಲ್ಲಿ (Hyderabad) ನಡೆದಿದೆ.
ಮೊಹಮ್ಮದ್ ಫಯಾಜ್ ಎಂಬಾತ ಬಾಂಗ್ಲಾದೇಶದ ಕಾಕ್ಸ್ ಬಜಾರ್ನಲ್ಲಿ ವಾಸವಾಗಿದ್ದ 18 ವರ್ಷದ ಮಹಿಳೆಯನ್ನು ಆಕೆಯ ಕುಟುಂಬಸ್ಥರಿಗೆ ತಿಳಿಸದೆ ಕಳೆದ ಮೇ ತಿಂಗಳಲ್ಲಿ ಹೈದರಾಬಾದ್ಗೆ ಕರೆದುಕೊಂಡು ಬಂದಿದ್ದ. ಅಲ್ಲಿ ಇಬ್ಬರು ಮದುವೆಯಾಗಿದ್ದರು. ಬಳಿಕ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಸಮಯದಲ್ಲಿ ಪತಿ ಪದೇ ಪದೇ ತನ್ನನ್ನು ಮನೆಯಲ್ಲಿ ಬೀಗ ಹಾಕಿ ಕೂಡಿಹಾಕುತ್ತಿದ್ದ. ಅಲ್ಲದೇ ಲೈಂಗಿಕ ದೌರ್ಜನ್ಯ ಎಸಗಲು ತನ್ನ ಮೂವರು ಸ್ನೇಹಿತರನ್ನು ಒಳಗೆ ಕಳುಹಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿ ಒಂಬತ್ತೇ ತಿಂಗಳಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ
ಅ.23 ರಂದು ಬಾಕಿ ಇರುವ ಮನೆ ಬಾಡಿಗೆಯನ್ನು ವಸೂಲಿ ಮಾಡಲು ಬಂದ ಮನೆ ಮಾಲೀಕರು, ಬೀಗವನ್ನು ಒಡೆದು ಬಾಗಿಲು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಮಹಿಳೆ ಮತ್ತೊಬ್ಬ ವ್ಯಕ್ತಿಯ ಮೊಬೈಲ್ ಫೋನ್ ಮೂಲಕ ತಮ್ಮ ಕುಟುಂಬವನ್ನು ಸಂಪರ್ಕಿಸಿ, ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದರು.
ಅ.26 ರಂದು, ಮಹಿಳೆಯ ಸಂಬಂಧಿ ಮೊಹಮ್ಮದ್ ರಶೀದ್, ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಮದುವೆಯಾದ ಸುಮಾರು ಒಂದು ತಿಂಗಳ ನಂತರ, ಫಯಾಜ್ ತನ್ನ ಮೂವರು ಸ್ನೇಹಿತರಾದ ಅಹ್ಮದ್ ಮುಜೀಬ್, ನೂರ್ ಕಮಲ್ ಮತ್ತು ಜಿಯಾ-ಉರ್-ರೆಹಮಾನ್ ಅವರನ್ನು ತಾವು ವಾಸಿಸುತ್ತಿದ್ದ ಬಾಡಿಗೆ ಮನೆಗೆ ಕೆರದುಕೊಂಡು ಬರುತ್ತಿದ್ದ. ಬಳಿಕ ಮನೆಗೆ ಬೀಗ ಹಾಕಿ ಪತಿ ಹೊರಗೆ ಹೋಗುತ್ತಿದ್ದ. ನಂತರ ಸ್ನೇಹಿತರನ್ನು ಮನೆಗೆ ಕಳುಹಿಸುತ್ತಿದ್ದ. ಈ ಸಮಯದಲ್ಲಿ ಮೂವರು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.
ದೂರಿನ ಅನ್ವಯ ಎಫ್ಐಆರ್ (FIR) ದಾಖಲಾಗಿದ್ದು, ನಾಲ್ವರು ವ್ಯಕ್ತಿಗಳ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಲಾಗಿದೆ. ಇದನ್ನೂ ಓದಿ: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಮಿಳುನಾಡಿನ ಜೈಲಿನಿಂದ 17 ಖೈದಿಗಳು ಪರಾರಿ – ಓರ್ವ ಅರೆಸ್ಟ್
