ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ (Muddebihal) ಬಸ್ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ನಗರ ಸಾರಿಗೆ (City Bus) ಬಸ್ ಏಕಾಏಕಿ ಹಿಮ್ಮುಖವಾಗಿ ಚಲಿಸಿ ಅವಘಡ ಸಂಭವಿಸಿದೆ.
ಹಲವಾರು ಪ್ರಯಾಣಿಕರಿದ್ದ ಬಸ್ ಅವಘಡಕ್ಕೆ ಒಳಗಾಗಿದೆ. ಚಾಲಕ ಬಸ್ ನಿಲ್ಲಿಸಿ ಆಚೆ ಹೋಗಿದ್ದರು. ನಿರ್ವಾಹಕ ಕೂಡ ಬಸ್ ಡ್ಯೂಟಿ ಎಂಟ್ರಿ ಮಾಡಿಸೋಕೆ ಹೋಗಿದ್ದರು. ಈ ವೇಳೆ ಬಸ್ ಏಕಾಏಕಿ ಹಿಮ್ಮುಖವಾಗಿ ಚಲಿಸಿದೆ. ಒಳಗಿದ್ದ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಇದನ್ನೂ ಓದಿ: ʻನನ್ನನ್ನು ಮದುವೆಯಾಗುʼ – ವಿಡಿಯೋ ಕರೆಯಲ್ಲಿ ಸಹೋದ್ಯೋಗಿಗೆ ಬೆದರಿಕೆ ಹಾಕಿ ನೇಣಿಗೆ ಶರಣಾದ ಟೆಕ್ಕಿ
ಬಸ್ ಹಿಮ್ಮುಖವಾಗಿ ಚಲಿಸುತ್ತಾ ನಿಲ್ದಾಣದ ಬಳಿಯ ಡಿಪೋ ಗೇಟ್ಗೆ ಡಿಕ್ಕಿಯಾಗಿ ನಿಂತಿದ್ದು, ಘಟನೆಯಿಂದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಚಾಲಕನ ಡೋರ್ನಿಂದ ಬಸ್ ಏರಿ ಮಹಿಳೆಯೊಬ್ಬರು ಕ್ಲಚ್ ಮೇಲೆ ಕಾಲಿಟ್ಟಿದ್ದು, ಬಸ್ ಹಿಂದಕ್ಕೆ ಚಲಿಸಲು ಮಹಿಳಾ ಪ್ರಯಾಣಿಕರೊರ್ವರು ಕಾರಣ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದಂತೆ ಗಾಬರಿಯಾದ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.ಇದನ್ನೂ ಓದಿ: ದೆಹಲಿಯ ಐತಿಹಾಸಿಕ ನಾರ್ತ್ ಬ್ಲಾಕ್ನಲ್ಲಿ ಬೆಂಕಿ
