ಹೈದರಾಬಾದ್: ಟೆಕ್ಕಿಯೊಬ್ಬಳು (Techie) ನನ್ನನ್ನು ಮದುವೆಯಾಗು ಎಂದು ವಿಡಿಯೋ ಕರೆಯಲ್ಲಿ ಸಹೋದ್ಯೋಗಿಗೆ ಬೆದರಿಕೆ ಹಾಕಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ನಲ್ಲಿ (Hyderabad) ನಡೆದಿದೆ.
ಉತ್ತರ ಪ್ರದೇಶ ಮೂಲದ ಅರ್ಚನಾ ಚೌಧರಿ ಮಲಿಕ್ (29) ನೇಣಿಗೆ ಶರಣಾದ ಮಹಿಳೆ. ಇವರು ಮೈಂಡ್ಸ್ಪೇಸ್ ಐಟಿ ಕಾರಿಡಾರ್ನಲ್ಲಿರುವ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ (ಅ.25) ನಸುಕಿನ ಜಾವ 2:30ರ ಸುಮಾರಿಗೆ, ತಮ್ಮ ಕಂಪನಿಯ ಸಹೋದ್ಯೋಗಿಯೊಬ್ಬರಿಗೆ ವಿಡಿಯೋ ಕರೆ ಮಾಡಿ, “ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ” ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಕೋಟ ಜಂಕ್ಷನ್ ಬಳಿ ಕಾರು ಅಪಘಾತ – ಹಿರಿಯ RSS ಮುಖಂಡ ದುರ್ಮರಣ
ನಂತರ ಸಹೋದ್ಯೋಗಿ ಆಕೆಯನ್ನು ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬೆಳಿಗ್ಗೆ 5:30ರ ಸುಮಾರಿಗೆ ಅವರು ಫ್ಲಾಟ್ಗೆ ತಲುಪಿದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಗಸ್ತು ತಿರುಗುತ್ತಿದ್ದ ಮಾದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲನ್ನು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಅರ್ಚನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾರು, ಎಲೆಕ್ಟ್ರಿಕ್ ಬೈಕ್ ಮುಖಾಮುಖಿ ಡಿಕ್ಕಿ – ನವದಂಪತಿ ಬಲಿ
