ಮಡಿಕೇರಿ: ಕಾವೇರಿ (Cauvery River) ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ಹಲವು ತಿಂಗಳುಗಳ ಬಳಿಕ ಕೆಆರ್ಎಸ್ ಡ್ಯಾಮ್ಗೆ (KRS Dam) ಒಳಹರಿವಿನ ಪ್ರಮಾಣ ಏರಿಕೆ ಕಂಡಿದೆ.
ಮಳೆ ಕೊರತೆಯಿಂದ ಡ್ಯಾಮ್ಗೆ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನೀರಿನ ಮಟ್ಟ 100 ಅಡಿಗಿಂತಲೂ ಕಡಿಮೆಗೆ ಕುಸಿದಿತ್ತು. ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಮ್ಗೆ ಇಂದು (ಅ.25) 9,457 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ತುಂತುರು ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಒಳಹರಿವು ಹೆಚ್ಚಳವಾಗುತ್ತಿದ್ದಂತೆ ಡ್ಯಾಮ್ನ ನೀರಿನ ಮಟ್ಟ 102.98 ಅಡಿಗೆ ಏರಿಕೆಯಾಗಿದೆ. ಸದ್ಯ ಅಣೆಕಟ್ಟೆಯಲ್ಲಿ ಒಟ್ಟು 25.235 ಟಿಎಂಸಿ ನೀರು ಸಂಗ್ರಹವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 1,589 ಕ್ಯುಸೆಕ್ ನೀರನ್ನು ಹೊರಹರಿವು ಬಿಡಲಾಗುತ್ತಿದೆ.
ಹಲವು ದಿನಗಳ ಬಳಿಕ ಕೆಆರ್ಎಸ್ ಜಲಾಶಯಕ್ಕೆ ನೀರು ಹರಿದುಬರುತ್ತಿರುವುದು ಅನ್ನದಾತರಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: ಬಿಜೆಪಿಯಲ್ಲೂ ಸ್ಟಿಂಗ್ ಆಪರೇಷನ್ ಆಗಿವೆ, ಸಿಡಿ ಯಾವಾಗ ಬರುತ್ತೆ ನೋಡಬೇಕು: ಯತ್ನಾಳ್ ಬಾಂಬ್
