ಆನೇಕಲ್: ದಸರಾ ಜಂಬೂಸವಾರಿ ದಿನವೇ ಆನೇಕಲ್ (Anekal) ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ರಕ್ತದೋಕುಳಿಯಾಗಿದೆ. ದೊಣ್ಣೆಯಿಂದ ಹೊಡೆದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ತಮಿಳುನಾಡಿನ ಸಾರಕ್ಕಪಲ್ಲಿ ಗ್ರಾಮದ ಯಲ್ಲಪ್ಪ (56) ಕೊಲೆಯಾದ ವ್ಯಕ್ತಿ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೇ ದಸರಾ ಜಂಬೂ ಸವಾರಿ ನೋಡಲು ಬಂದಿದ್ದ ಯಲ್ಲಪ್ಪ. ದಸರಾ ಅಂಬಾರಿ ನೋಡಲು ಬಂದಿರೋದಾಗಿ ಪತ್ನಿಗೆ ಪೋನ್ ಮಾಡಿ ಹೇಳಿದ್ದ. ಇದನ್ನೂ ಓದಿ: ಗದಗ | ಬೆಳೆ ಮಾರಾಟ ವಿಷಯಕ್ಕೆ ಸ್ನೇಹಿತನಿಗೆ ವಂಚಿಸಿ ಕೊಲೆ
ರಾತ್ರಿ ಚಿಕ್ಕಕೆರೆ ಸ್ಟೇಡಿಯಂನಲ್ಲಿ ಕುಡಿಯಲು ಹೋದಾಗ ಗಲಾಟೆಯಾಗಿರುವ ಶಂಕೆ ವ್ಯಕ್ತವಾಗಿದೆ. ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಮುಂಜಾನೆ ಮೃತದೇಹ ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಆನೇಕಲ್ ಶವಗಾರಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ: ಬ್ಲೂ ಡ್ರಮ್ ಕೊಲೆ ಕೇಸ್ – ಜೈಲಿನಲ್ಲಿರೋ ಮುಸ್ಕಾನ್ ಮಗುವನ್ನ ದತ್ತು ಪಡೆಯಲು ಮುಂಬೈ ಇನ್ಫ್ಲುಯೆನ್ಸರ್ ಅರ್ಜಿ
ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
