ಬಿಗ್ಬಾಸ್ (Bigg Boss) ಮನೆ ಒಂದು ಅಪರಾಧ-ಥ್ರಿಲ್ಲರ್ ಸಿನಿಮಾದ ಸೆಟ್ನಂತೆ ಮಾರ್ಪಟ್ಟಿದೆ. ರಕ್ಷಕರ ಜಗಳವನ್ನೇ ಲಾಭ ಮಾಡಿಕೊಂಡು ಮಾಸ್ಟರ್ ಪ್ಲ್ಯಾನ್ ಮಾಡಿ ಲೂಟಿಕೋರರು ಕಿರೀಟವನ್ನು ಎಗರಿಸಿಬಿಟ್ಟಿದ್ದಾರೆ.
ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಲೂಟಿಕೋರರು ಹಾಗೂ ರಕ್ಷಕರು ಟಾಸ್ಕ್ನಲ್ಲಿ ಡೈಮೆಂಡ್ ಕದ್ದಿದ್ದ ಕಳ್ಳರು ಮಾಸ್ಟರ್ ಪ್ಲ್ಯಾನ್ ಮಾಡಿ, ಕಿರೀಟವನ್ನು ಕದ್ದು ನಕಲಿ ಕಿರೀಟವನ್ನು ಅದೇ ಜಾಗದಲ್ಲಿಟ್ಟಿದ್ದಾರೆ. ಒಂದು ಸಿನಿಮಾದ ಥ್ರಿಲ್ಲರ್ ಸೀನ್ನಂತೆ ಕಳ್ಳತನ ನಡೆದಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಲೂಟಿಕೋರರು Vs ರಕ್ಷಕರು
ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/EnpJwR9UzZ
— Colors Kannada (@ColorsKannada) October 22, 2026
ಲೂಟಿಕೋರರು ನಿಧಾನವಾಗಿ ಓಡಾಡುತ್ತಾ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಲು ಸ್ಕೆಚ್ ಹಾಕುತ್ತಿದ್ದರೆ, ಇತ್ತ ಸೆಕ್ಯೂರಿಟಿ ಪಡೆ ಲಾಠಿ ಹಿಡಿದು ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಇದರ ನಡುವೆ ಸೆಕ್ಯೂರಿಟಿಗಳ ಮಧ್ಯೆಯೇ ಜಗಳ ಶುರುವಾಗಿ, ಗಾನವಿ ಹಾಗೂ ಕಿರಣ್ ಕಿತ್ತಾಡಿಕೊಂಡಿದ್ದಾರೆ.
ಇದೇ ಸಮಯವನ್ನೇ ಬಳಸಿಕೊಂಡ ಲೂಟಿಕೋರರು, ಅನ್ನ ಬಡಿಸಿಕೊಳ್ಳುವ ನೆಪದಲ್ಲಿ ಅಡುಗೆ ಮನೆಗೆ ನುಗ್ಗುತ್ತಾರೆ. ಬಳಿಕ ತಾಂಡವ್ ನೆಲದ ಮಲಗಿ ನಕಲಿ ಕಿರೀಟವನ್ನು ಸಿದ್ಧಪಡಿಸುತ್ತಾರೆ. ಅದರ ಬಳಿಕ ತಯಾರಿಸಿದ ನಕಲಿ ಕಿರೀಟವನ್ನು ಸೌಂದರ್ಯ ಕೈಗೆ ಕೊಟ್ಟಾಗ, ಕೂಡಲೇ ಅಸಲಿ ಹಾಗೂ ನಕಲಿ ಕಿರೀಟವನ್ನು ಬದಲಿಸಿ, ತಾಂಡವ್ ಅಸಲಿ ಕಿರೀಟವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ರಕ್ಷಕರು ಎಚ್ಚೆತ್ತುಕೊಳ್ಳುವಷ್ಟರಲ್ಲೇ ಕಳ್ಳರು ತಮ್ಮ ಮಾಸ್ಟರ್ ಪ್ಲಾನ್ ಯಶಸ್ವಿಗೊಳಿಸಿದ್ದಾರೆ.ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್ ಕೇಸ್ಗೆ ಟ್ವಿಸ್ಟ್ – ಅ.11ರಂದೇ ದಾಳಿಗೆ ಸಂಚು
