ಬಿಗ್ಬಾಸ್ (Bigg Boss) ಮನೆಯಲ್ಲಿ ಇದೀಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಇಡೀ ಮನೆ ಒಂದು ಅಪರಾಧ-ಥ್ರಿಲ್ಲರ್ ಸಿನಿಮಾದ ಸೆಟ್ನಂತೆ ಮಾರ್ಪಟ್ಟಿದೆ. ಮನೆಮಂದಿಗೆ ನೀಡಲಾದ ಹೊಸ ಟಾಸ್ಕ್ನಲ್ಲಿ ರಕ್ಷಕರು ಹಾಗೂ ಲೂಟಿಕೋರರು ಮಧ್ಯೆ ಕಾದಾಟ ನಡೆಯಲಿದೆ.
ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಲೂಟಿಕೋರರು ಹಾಗೂ ರಕ್ಷಕರು ಎಂಬ ಹೊಸ ಟಾಸ್ಕ್ ನೀಡಿದ್ದಾರೆ. ಅದರಲ್ಲಿ ಮನೆಯಲ್ಲಿಟ್ಟಿರುವ ಕೆಲ ಬೆಲೆಬಾಳುವ ವಸ್ತುಗಳನ್ನು ಲೂಟಿಕೋರರು ತೆಗೆದುಕೊಂಡು ಹೋಗಬೇಕು. ಅದರಂತೆ ಆ ವಸ್ತುಗಳನ್ನು ಲೂಟಿಕೋರರು ಕಳ್ಳತನ ಮಾಡದಂತೆ ರಕ್ಷಕರು ರಕ್ಷಣೆ ಮಾಡಬೇಕು. ಇದನ್ನೂ ಓದಿ: `ಜೈಲರ್ 2′ ವೀಕ್ಷಣೆಗೆ ಇಡೀ ಥಿಯೇಟರ್ ಬುಕ್ ಮಾಡಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್
ಬಿಗ್ ಬಾಸ್ ಮನೆಯಲ್ಲಿ ಲೂಟಿಕೋರರ ಅಬ್ಬರ ಜೋರು…
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/jAUcJnZRLK
— Colors Kannada (@ColorsKannada) October 20, 2026
ನಾಮಿನೇಟ್ ಆದ ಸದಸ್ಯರು ಜೈಲು ಪಾಲಾಗಿದ್ದು, ಕಿತ್ತಳೆ ಬಣ್ಣದ ಜೈಲು ಸಮವಸ್ತ್ರ ಧರಿಸಿರುವ ಕಾರಾಗೃಹದ ಸದಸ್ಯರನ್ನು ಬಿಗ್ ಬಾಸ್ `ಲೂಟಿಕೋರರು’ ಎಂದು ಘೋಷಿಸಿದ್ದಾರೆ. ಇವರಿಗೆ ಮನೆಯಲ್ಲಿ ಪ್ರದರ್ಶನಕ್ಕಿಟ್ಟಿರುವ ಅತಿ ಬೆಲೆಬಾಳುವ ವಜ್ರ, ಪದಕ ಮತ್ತು ಕಿರೀಟವನ್ನು ಲೂಟಿ ಮಾಡುವ ಜವಾಬ್ದಾರಿ ನೀಡಲಾಗಿದೆ. ಅದರಂತೆ ಕಳ್ಳರ ಪಡೆ ವಸ್ತುಗಳನ್ನು ಕದಿಯಲು ರಣತಂತ್ರ ಹೆಣೆದಿದ್ದಾರೆ.
ಇತ್ತ ಕಪ್ಪು ಸಮವಸ್ತ್ರದಲ್ಲಿರುವವರನ್ನು ಸೆಕ್ಯೂರಿಟಿ ಗಾರ್ಡ್ಗಳು ಮ್ಯೂಸಿಯಂನಿಂದ ಯಾವುದೇ ವಸ್ತುಗಳು ಕಳ್ಳತನವಾಗದಂತೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಆದರೆ ಕಳ್ಳರು ಬೇರೆ ಬೇರೆ ತಂತ್ರಗಳ ಮೂಲಕ ವಸ್ತುಗಳನ್ನು ಎಗರಿಸಲು ಯತ್ನಿಸುತ್ತಿದ್ದಂತೆ, ರಕ್ಷಕರು ಮತ್ತು ಕಳ್ಳರ ನಡುವೆ ಮಾತಿನ ಚಕಮಕಿ, ತಳ್ಳಾಟ ಮತ್ತು ಗಲಾಟೆ ತಾರಕಕ್ಕೇರಿದೆ.ಇದನ್ನೂ ಓದಿ: ರಚಿತಾ ರಾಮ್ ಹೆಗಲ ಮೇಲೆ ಕೈ ಹಾಕಿ ಸೆಲ್ಫಿಗೆ ಯತ್ನ – ಅಭಿಮಾನಿ ಹುಚ್ಚಾಟ
ಒಂದೆಡೆ ಚಾಣಾಕ್ಷ ಕಳ್ಳರ ಸ್ಕೆಚ್, ಮತ್ತೊಂದೆಡೆ ಬಿಗಿ ಭದ್ರತೆಯ ಕಾವಲುಗಾರರ ಎಚ್ಚರ. ಈ ರೋಮಾಂಚಕ ಆಟದಲ್ಲಿ ಅಂತಿಮವಾಗಿ ವಜ್ರ ಯಾರ ಪಾಲಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ತೀವ್ರಗೊಂಡಿದೆ.
