ಯಾದಗಿರಿ: ನಾಲ್ಕು ಜಿಲ್ಲೆಯ ಅನ್ನದಾತರ ಪಾಲಿಗೆ ಜೀವನಾಡಿಯಾಗಿರುವ ಬಸವಸಾಗರ ಜಲಾಶಯದಲ್ಲಿನ (Basavasagar Dam) ನೀರು ದಿನೇ ದಿನೇ ಕಡಿಮೆಯಾಗುತ್ತಿದೆ.
ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ (Hunsagi) ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಅನ್ನದಾತರ ಪಾಲಿಗೆ ಜೀವನಾಡಿಯಾಗಿರುವ ಜಲಾಶಯ. ಆದರೆ ಜಲಾಶಯದಲ್ಲಿನ ನೀರು ಕಡಿಮೆಯಾಗುತ್ತಿದೆ. ಇದನ್ನೂ ಓದಿ: ಉಡುಪಿ | ಗಂಗಾರತಿ, ಜಲಸ್ತಂಭನದೊಂದಿಗೆ ಉಚ್ಚಿಲ ದಸರಾ ವೈಭವಕ್ಕೆ ತೆರೆ
33.33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ ಕೇವಲ 24 ಟಿಎಂಸಿ ನೀರು ಮಾತ್ರವಿದೆ. ಇದರಲ್ಲಿ 4 ಟಿಎಂಸಿ ನೀರು ಮಾತ್ರ ಬಳಕೆ ಸಿಗುತ್ತೆ. ಉಳಿದ 20 ಟಿಎಂಸಿ ನೀರಿನಲ್ಲಿ 6 ಟಿಎಂಸಿ ನೀರು ರಿಸರ್ವ್ ಆಗಿ ಇಡಲಾಗುತ್ತದೆ. ಉಳಿದ 14 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಡೆಡ್ ಸ್ಟೋರೇಜ್ನಲ್ಲಿನ ನೀರು ಬಳಕೆಗೆ ಬರಲ್ಲ. ಈಗ ಏನಿದ್ರು ನಾಲ್ಕು ಟಿಎಂಸಿಯಲ್ಲೇ ನೀರಿನಲ್ಲೇ ನಿರ್ವಹಣೆ ಮಾಡಬೇಕಾಗಿದೆ.
ಮುಂಗಾರು ಬೆಳೆಗೆ ನೀರಿನ ಕೊರತೆ ಹಿನ್ನೆಲೆ ವಾರಬಂದಿ ಮೂಲಕ ನೀರು ಹರಿಸಲಾಗುತ್ತಿದೆ. ಇದೇ ಮೊದಲ ಸಲ ಈ ರೀತಿ ನೀರು ಹರಿಸಲಾಗುತ್ತಿದೆ. ಪ್ರತಿ ಬಾರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿದ್ದರಿಂದ ಮೊದಲ ಬೆಳೆಗೆ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು. ಆದ್ರೆ ಈಗ ನೀರಿನ ಲಭ್ಯತೆ ಮೇಲೆ ನೀರು ಹರಿಸಲಾಗುತ್ತಿದೆ. ಮೇ, ಜೂನ್ನಲ್ಲಿ ಮಳೆ ಆಗದ ಹಿನ್ನೆಲೆ ಆಗಲೇ ಜಲಾಶಯ ಬತ್ತಿ ಹೋಗುತ್ತೆ ಅಂತ ಅಂದುಕೊಳ್ಳಲಾಗಿತ್ತು. ಆದ್ರೆ ಜುಲೈ ಹಾಗೂ ಆಗಸ್ಟ್ ಮಹಾರಾಷ್ಟ್ರದಲ್ಲಿ ಮಳೆ ಆಗಿದ್ದಕ್ಕೆ ಜಲಾಶಯ ಭರ್ತಿ ಆಗಿತ್ತು. ಈಗ ಮತ್ತೆ ಮಳೆ ಇಲ್ಲದ ಹಿನ್ನೆಲೆ ಜಲಾಶಯ ಖಾಲಿಯಾಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ದಾಖಲೆಯ ಜಯ – ಕಿವೀಸ್ ನೆಲದಲ್ಲಿ ಇತಿಹಾಸ ಸೃಷ್ಟಿ
ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆ ಹಿಂಗಾರು ಬೆಳೆಗೆ ನೀರು ಹರಿಸೋದು ಕಷ್ಟ. ಜೊತೆಗೆ ಮುಂದೆ ಕುಡಿಯುವ ನೀರಿಗೂ ಸಾಕಷ್ಟು ತೊಂದರೆ ಆಗಲಿದೆ. ಮುಂದೆ ಮಳೆಗಾಲದವರೆಗೆ ಈ ನೀರಿನಲ್ಲಿ ನಿರ್ವಹಣೆ ಮಾಡಬೇಕಾಗಿದೆ. ನಾಲ್ಕು ಜಿಲ್ಲೆಯಲ್ಲಿ ಈ ಜಲಾಶಯದ ನೀರು ಬಳಕೆ ಮಾಡಿಕೊಂಡು 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತದೆ. ಈ ಬಾರಿ ಹಿಂಗಾರು ಬೆಳೆಗೆ ವಾರಬಂದಿ ಅಲ್ಲ ನೀರು ಸಿಗೋದೆ ಡೌಟು ಎನ್ನುವಂತಾಗಿದೆ. ಇದರಿಂದ ಅನ್ನದಾತರಲ್ಲಿ ಆತಂಕ ಮನೆ ಮಾಡಿದ್ದು, ಜನ ಜಾನುವಾರುಗಳಿಗೂ ಜಲದಾಹ ಉಂಟಾಗಲಿದೆ ಎನ್ನುವ ಭಯ ಹುಟ್ಟಿದೆ. ಇದನ್ನೂ ಓದಿ: ಲಾರಿಗೆ KSRTC ಬಸ್ ಡಿಕ್ಕಿ – ಚಾಲಕ, ಪ್ರಯಾಣಿಕ ದುರ್ಮರಣ
