ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಮುಖಂಡರಾದ ಅಶುತೋಷ್ ರಾಂಕಾ(Ashutosh Ranka) ಮತ್ತು ಸೌರವ್ ದಾಸ್(Saurav Das) ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (Special Executive Magistrate) ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿ ಆದೇಶಿಸಿದ್ದಾರೆ.
Delhi: On the two-day extension of judicial custody for CJP leaders Saurav Das and Ashutosh Ranka, CJP spokesperson Mehar Pasricha says, “It’s deplorable what is happening. Are these our courts? Is this what justice is supposed to look like? We know what has happened here; it is clear. We know what crime these two boys have committed…”
— IANS (@ians_india) October 19, 2026
ನಾಯಕರನ್ನು ಬಿಡುಗಡೆ ಮಾಡಿದರೆ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸರು ವಾದಿಸಿ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಿದ್ದರು.
#WATCH | Delhi: Visuals from Mandir Marg Police Station from where CJP leaders Saurav Das and Ashutosh Ranka are being taken away back to judicial custody. As per their lawyer, their surety was turned down today after a reported ‘mismatch’ in documents. https://t.co/muktRB5n8w
— ANI (@ANI) October 19, 2026
ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಬಾಂಡ್ ಷರತ್ತು ಉಲ್ಲಂಘಿಸಿದ್ದಕ್ಕೆ ಇಬ್ಬರೂ ನಾಯಕರನ್ನು ಪೊಲೀಸರು ಅ.14 ರಂದು ವಶಕ್ಕೆ ಪಡೆದಿದ್ದರು. 5 ದಿನಗಳ ನ್ಯಾಯಾಂಗ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಬಂಧನದ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಿದೆ.
#WATCH | Advocate Dharamvir says, “Their bail applications were denied today. They will be taken back into judicial custody. Matter will be listed again tomorrow. The matter will be decided on tomorrow. Surety bonds will have to be presented again. Despite presenting a fresh surety bond, mismatch was pointed out by security officer…”
— ANI (@ANI) October 19, 2026
ಪೊಲೀಸರು ಉದ್ದೇಶಪೂರ್ವಕವಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಸಿಜೆಪಿ ಆರೋಪಿಸಿದ್ದರೆ, ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
