ತಿರುವನಂತಪುರಂ: 18 ವರ್ಷದ ಪ್ರಿಯತಮೆಯನ್ನು ಕಲ್ಲಿನಿಂದ ಜಜ್ಜಿ ಪ್ರಿಯಕರ ಹತ್ಯೆ ಮಾಡಿದ್ದು, ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾನೆ.
ಕೇರಳದ (Kerala) ಇಡುಕ್ಕಿ ಜಿಲ್ಲೆಯಲ್ಲಿ, 2023ರಲ್ಲಿ ಆರಂಭವಾದ ಸಂಬಂಧವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. 18 ವರ್ಷದ ಯುವತಿಯೊಬ್ಬಳನ್ನು ಆಕೆಯ ಮಾಜಿ ಪ್ರಿಯಕರನು ಕುತ್ತಿಗೆ ಹಿಸುಕಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರಾಜಕುಮಾರಿಯ ವಟ್ಟಪ್ಪಾರ ಬಿ ವಿಭಾಗದ ನಿವಾಸಿಯಾದ 19 ವರ್ಷದ ನಿಶಾಂತ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಈತನನ್ನು ಬಂಧಿಸಲಾಗಿದೆ.
ತಮಿಳುನಾಡಿನ ಬೋಡಿನಾಯಕನೂರಿನ ಪರಮಶಿವಂ ಕೊಯಿಲ್ ಸ್ಟ್ರೀಟ್ನ ನಿವಾಸಿ ನಿತ್ಯಾ ಎಂದು ಹತ್ಯೆಗೀಡಾಗಿದ್ದಾಳೆ. ಇವರಿಬ್ಬರೂ 2023ರಿಂದ ಪ್ರೇಮ ಸಂಬಂಧದಲ್ಲಿದ್ದರು. ಆದರೆ, ನಂತರ ಬೇರ್ಪಟ್ಟರು. ನಿಶಾಂತ್, ನಿತ್ಯಾಳನ್ನು ಸಂಪರ್ಕಿಸಿ, ತಮ್ಮ ಸಂಬಂಧದ ಬಗ್ಗೆ ಚರ್ಚಿಸುವ ನೆಪದಲ್ಲಿ ಪೂಪಾರದಲ್ಲಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದನೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಹೋದ್ಯೋಗಿಯೊಂದಿಗೆ ಡೇಟ್ ಮಾಡಿದ್ದಕ್ಕೆ ಪತ್ನಿ ಕೊಲೆ – ಅಮೆರಿಕದಲ್ಲಿ ಗುಜರಾತ್ ಮೂಲದ ವ್ಯಕ್ತಿ ಬಂಧನ
ಅಕ್ಟೋಬರ್ 11 ರಂದು ಮಧ್ಯಾಹ್ನ ಸುಮಾರು 2:30 ರ ಸುಮಾರಿಗೆ, ಇಬ್ಬರೂ ಪೂಪಾರಾದಲ್ಲಿರುವ ಒಂದು ಚಹಾ ತೋಟದಲ್ಲಿ ಭೇಟಿಯಾದರು. ಮಾತುಕತೆಯಾಗಿ ಪ್ರಾರಂಭವಾದದ್ದು, ತೀವ್ರ ವಾಗ್ವಾದಕ್ಕೆ ತಿರುಗಿತು. ನಿಶಾಂತ್ ನಿತ್ಯಳ ಕುತ್ತಿಗೆಯನ್ನು ಹಿಸುಕಿ, ನಂತರ ಅವಳ ಮೇಲೆ ಕಲ್ಲಿನಿಂದ ಪದೇಪದೇ ಹಲ್ಲೆ ನಡೆಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 10 ಗಂಟೆಯ ನಂತರ, ನಿಶಾಂತ್ ನಿತ್ಯಳ ಮೃತದೇಹವನ್ನು ತನ್ನ ಆಟೋರಿಕ್ಷಾದಲ್ಲಿ ಹಾಕಿಕೊಂಡು ಪಾಂಬ್ಲಾ ಅಣೆಕಟ್ಟು ಪ್ರದೇಶಕ್ಕೆ ಕೊಂಡೊಯ್ದು, ಬೆಂಕಿ ಹಚ್ಚಿ ಸುಟ್ಟಿದ್ದಾನೆ. ನಂತರ ಅಣೆಕಟ್ಟಿನ ಬಳಿ ಆ ಯುವತಿಯ ಸುಟ್ಟುಹೋದ ಅವಶೇಷಗಳು ಪತ್ತೆಯಾಗಿವೆ. ಇದು ಪೊಲೀಸ್ ತನಿಖೆಗೆ ಕಾರಣವಾಯಿತು. ಇದನ್ನೂ ಓದಿ: ರಾಷ್ಟ್ರೀಯ ಮಹಿಳಾ ಆಯೋಗದ ಅಂಗಳ ತಲುಪಿದ ʻಸ್ಟಿಂಗ್ ಆಪರೇಷನ್ʼ ವಿಡಿಯೋ ಕೇಸ್!
ಕೊಲೆಯ ನಂತರ ನಿಶಾಂತ್ ತನ್ನ ಮೊಬೈಲ್ ಫೋನ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ. ಅಂತಿಮವಾಗಿ ಪೊಲೀಸರು ಅವನ ಇರುವಿಕೆಯನ್ನು ಪತ್ತೆಹಚ್ಚಿ, ರಾಜಕುಮಾರಿ ಪ್ರದೇಶದಲ್ಲಿ ಅವನನ್ನು ವಶಕ್ಕೆ ತೆಗೆದುಕೊಂಡರು.

