ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ರಾಮರಸ(Ramarasa) ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹು ತಾರಾಬಳಗದ ಈ ಚಿತ್ರವನ್ನು ಗುರು ದೇಶಪಾಂಡೆ(Guru Deshpande) ಹಾಗೂ ವಿಕ್ರಮ್ ಆರ್ಯ ಅವರು ನಿರ್ಮಿಸುತ್ತಿದ್ದಾರೆ. ಬಿ.ಎಂ.ಗಿರಿರಾಜ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ನಿರ್ಮಾಪಕರೆ ಆರಂಭಿಸಿರುವ ಸೆವೆನ್ ಸ್ಟಾರ್ ಮ್ಯೂಸಿಕ್ ಸಂಸ್ಥೆಯ ಲೆಬಲ್ ಅನಾವರಣ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ರಾಮರಸ ಚಿತ್ರ ಮೊದಲಿನಿಂದಲೂ ಒಂದಲಾ ಒಂದು ವಿಶೇಷಗಳಿಗೆ ಸಾಕ್ಷಿಯಾಗುತ್ತಿದೆ. ಈಗ ನಾವಿಬ್ಬರು ನಿರ್ಮಾಪಕರು ಸೇರಿ ಸೆವೆನ್ ಸ್ಟಾರ್ ಮ್ಯೂಸಿಕ್ ಎಂಬ ಆಡಿಯೋ ಕಂಪನಿಯನ್ನು ಆರಂಭಿಸಿದ್ದೇವೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ ರಾಮರಸ ಚಿತ್ರದ ಹಾಡುಗಳು ಬಿಡುಗಡೆಯಾಗಲಿದೆ. ಬರಿ, ನಮ್ಮ ಚಿತ್ರ ಅಂತ ಅಲ್ಲ. ಬೇರೆ ಯಾವುದೇ ಚಿತ್ರತಂಡದವರು ಸಹ ತಮ್ಮ ಚಿತ್ರದ ಹಾಡುಗಳನ್ನು ನಮ್ಮ ಸಂಸ್ಥೆಯ ಮೂಲಕ ಬಿಡುಗಡೆ ಮಾಡಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸೋನಿ ಸಂಸ್ಥೆಯ ಸೋದರಿ ಸಂಸ್ಥೆಯಾದ ಆರ್ಚಿಡ್ ಸಂಸ್ಥೆಯೊಂದಿಗೆ ನಮ್ಮ ಸೆವೆನ್ ಸ್ಟಾರ್ ಮ್ಯೂಸಿಕ್ ಸಂಸ್ಥೆಯನ್ನು ಸೇರಿಕೊಂಡಿದೆ. ಈ ಸಂಸ್ಥೆ ಸಾಕಷ್ಟು ಹೆಸರಾಂತ ಆಡಿಯೋ ಕಂಪನಿಗಳ ಜೊತೆಗೆ ಕೈಜೋಡಿಸಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಚಿತ್ರಗಳು ಎಲ್ಲರನ್ನು ತಲುಪಲು ಅನುಕೂಲವಾಗುತ್ತದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದರು.

ನಮ್ಮ ಸೆವೆನ್ ಸ್ಟಾರ್ ಮ್ಯೂಸಿಕ್ ಸಂಸ್ಥೆಯನ್ನು ನಮ್ಮ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಮಾತ್ರ ಆರಂಭಿಸಿಲ್ಲ. ವರ್ಷಕ್ಕೆ 200 ಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗುತ್ತಿದೆ. ಹೊಸ ನಿರ್ಮಾಪಕರಿಗೆ ಆಡಿಯೋ ಕಂಪನಿ ಕುರಿತು ಹೆಚ್ಚು ಮಾಹಿತಿ ಇರುವುದಿಲ್ಲ. ಅಂತಹ ಹೊಸತಂಡದವರು ನಮ್ಮನ್ನು ಸಂಪರ್ಕಿಸಿ ಎಲ್ಲವನ್ನು ತಿಳಿಸುಕೊಂಡು ನಮ್ಮ ಆಡಿಯೋ ಸಂಸ್ಥೆಯ ಮೂಲಕ ತಮ್ಮ ಚಿತ್ರದ ಆಡಿಯೋ ರಿಲೀಸ್ ಮಾಡಬಹುದೆಂದು ಹೇಳಿದರು. ಗುರು ದೇಶಪಾಂಡೆ ಹಾಗೂ ವಿಕ್ರಮ್ ಆರ್ಯ ಅವರು ಸೇರಿ ಸೆವೆನ್ ಸ್ಟಾರ್ ಮ್ಯೂಸಿಕ್ ಸಂಸ್ಥೆ ಆರಂಭಿಸಿರುವುದು ಬಹಳ ಖುಷಿಯಾಗಿದೆ. ಟೀಸರ್ ಗೆ ಶ್ರೀಮುರಳಿ ಅವರು ಧ್ವನಿ ನೀಡಿದ್ದಾರೆ. ಅವರ ಧ್ವನಿ ಅದ್ಭುತವಾಗಿದೆ. ಬಿ.ಎಂ.ಗಿರಿರಾಜ್ ನಿರ್ದೇಶನದ ರಾಮರಸ ಚಿತ್ರದಲ್ಲಿ ನಾನು ಸುಡುಗಾಡು ಸಿದ್ದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅದಷ್ಟೇ ಅಲ್ಲ. ಬೇರೆ ಶೇಡ್ ಗಳು ಸಹ ಇದೆ ಎಂದರು ನಟ ಪ್ರಜ್ವಲ್ ದೇವರಾಜ್. ಇದನ್ನೂ ಓದಿ: ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾದ `ರಾಮಾಯಣ’: ಯಶ್- ರಣಬೀರ್ ಅಬ್ಬರದ ಎರಡನೇ ಟ್ರೇಲರ್ ಔಟ್
ನಾನು ತುಂಬಾ ಎಮೋಷನ್ ಆಗಿದ್ದೀನಿ. ಈ ಚಿತ್ರದ ಮೂಲಕ ನನ್ನನ್ನು ಪೂರ್ಣಪ್ರಮಾಣದ ನಾಯಕನಟನಾಗಿ ಮಾಡಿರುವ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತೇನೆ. ನಿರ್ದೇಶಕ ಗಿರಿರಾಜ್ ಅವರು ಸಹ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್(Prajwal Devaraj) ಶರಣ್, ಆದಿತ್ಯ, ಕೋಮಲ್ ಕುಮಾರ್, ಅದಾ ಶರ್ಮ, ಅನುಷಾ ರೈ ಮುಂತಾದವರ ಬಹು ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ ಎಂದರು ನಾಯಕ ಕಾರ್ತಿಕ್ ಮಹೇಶ್. ನಟಿ ಅನುಶಾ ರೈ ಸಹ ಚಿತ್ರದ ಕುರಿತು ಮಾತನಾಡಿದರು. ರಾಮರಸ ಚಿತ್ರದಲ್ಲಿ ನಟಿಸಿರುವ ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


