ಬಿಗ್ಬಾಸ್ ಕನ್ನಡ 13ರ (Bigg Boss Kannada 13) ಈ ವಾರ ಧನುಷ್ (Dhanush) ಕ್ಯಾಪ್ಟನ್ ಆಗಿದ್ದಾರೆ. ಕಾಲು ನೋವಿದ್ದರೂ ಕೂಡ ಕುಂಟುತ್ತಲೇ ಆಟವಾಡಿ ಧನುಷ್ ಈ ವಾರದ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ವೊಂದನ್ನು ನೀಡಿದ್ದರು. ಆ ಪೈಕಿ ಗಾರ್ಡನ್ ಏರಿಯಾದಲ್ಲಿ ತಿರುಗಿಸಿ ಇಡಲಾಗಿದ್ದ ಕಾರ್ಡ್ಗಳ ಸರಿಯಾದ ಜೋಡಿಗಳನ್ನು ನಿಗದಿತ ಸಮಯದಲ್ಲಿ ಹುಡುಕಬೇಕು. ಹೀಗೆ ಎರಡು ಬಾರಿ ಹುಡುಕಿದ ಸ್ಪರ್ಧಿ ಆಟದಿಂದ ಒಬ್ಬರನ್ನು ಹೊರಗಿಡಲು ಅವಕಾಶ ಪಡೆದುಕೊಳ್ಳುತ್ತಾರೆ. ಹೀಗೆ ಆಟದ ಕೊನೆಯಲ್ಲಿ ಉಳಿಯುವ ಒಬ್ಬ ಸ್ಪರ್ಧಿ ಆಟ ಗೆದ್ದು, ಕ್ಯಾಪ್ಟನ್ ಆಗುತ್ತಾರೆ. ಇದನ್ನೂ ಓದಿ: BBK 13: ಟಾಸ್ಕ್ನಲ್ಲಿ ಕೀಳು ಪದ ಬಳಕೆ – 2ನೇ ಬಾರಿ ಮಂಜ ಜೈಲಿಗೆ
ಹಿಂದಿನ ಗಂಧರ್ವ ಹಾಗೂ ರಾಕ್ಷಸರು ಟಾಸ್ಕ್ನಲ್ಲಿ ಕಾಲು ನೋವು ಮಾಡಿಕೊಂಡಿದ್ದರೂ ಕೂಡ ಇಂದಿನ ಟಾಸ್ಕ್ನಿಂದ ಕುಂಟುತ್ತಲೇ ಆಡಿ ಧನುಷ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಟಾಸ್ಕ್ ಅನ್ನು ಚೆನ್ನಾಗಿ ಅರಿತು, ತನ್ನ ಚಾತುರ್ಯತೆಯನ್ನು ಬಳಸಿ ಆಡಿ, ಕ್ಯಾಪ್ಟನ್ಸಿ ಅಲಂಕರಿಸಿದ್ದಾರೆ.
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/lEDqDSIZDf
— Colors Kannada (@ColorsKannada) October 9, 2026

