ಚೆನ್ನೈ: ತಮಿಳುನಾಡಿನ (Tamilnadu) ಮದುರಾಂತಕಮ್ ಹಾಗೂ ಧಾರಾಪುರಂ ಮೀಸಲು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಗೆಲುವನ್ನು ಸಾಧಿಸಿದೆ.
ತಾವು ಮೊದಲು ಅಣ್ಣಾ ಡಿಎಂಕೆ ಶಾಸಕರಾಗಿದ್ದ ಧಾರಾಪುರಂ (Dharapuram) ಹಾಗೂ ಮಧುರಾಂತಕಂ (Madurantakam) ಕ್ಷೇತ್ರದಿಂದ ಇದೀಗ ಮತ್ತೆ ಟಿವಿಕೆ ಪಕ್ಷದಿಂದ ಸ್ಪರ್ಧಿಸುವ ಮೂಲಕ ಸತ್ಯಭಾಮ ಹಾಗೂ ಮಾರಗತಂ ತಂಗವೇಲು ಅವರು ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಶನಿವಾರ ದಿಲ್ಲಿಯಲ್ಲಿ ʻಜಿರಳೆʼ ಪ್ರತಿಭಟನೆ – ಇಂದು ರಾತ್ರಿ 10 ಗಂಟೆಯಿಂದಲೇ ಇಂಟರ್ನೆಟ್ ಸೇವೆ ಸ್ಥಗಿತ
ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ ವಿಜಯ್, ಮಹಿಳೆಯರ ಬಗ್ಗೆ ಕೀಳಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡಿದವರಿಗೆ ಜನರು ಈ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದು ಡಿಎಂಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸತ್ಯಭಾಮ ಹಾಗೂ ಮಾರಗತಂ ತಂಗವೇಲು ಅವರು ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ರಾಜೀನಾಮೆ ನೀಡಿ ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಅದೇ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: KPSC Scam | ಸಿಡಿಆರ್ ರಿಪೋರ್ಟ್ನಿಂದ ಸಿಕ್ಕಿಬಿದ್ದ ಸದಸ್ಯೆ ಗೀತಾ

