ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲು ಸಜ್ಜಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ರಾಮರಸ’ದ (Ramarasa film) ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಇದರ ಜೊತೆಗೆ ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಡಿಸೆಂಬರ್ 11ರಂದು ಈ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.
ನಿರ್ದೇಶಕ ಬಿ.ಎಂ. ಗಿರಿರಾಜ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಫ್ಯಾಂಟಸಿ, ಜಾನಪದ ಮತ್ತು ದೈವಿಕ ರಹಸ್ಯಗಳ ಸಮ್ಮಿಲನವಾಗಿರುವ ‘ರಾಮರಸ’ ಸಿನಿಮಾ, ಪರಾಶಕ್ತಿಯ ದೈವಿಕ ಆಟದ ಸುತ್ತ ಕಥೆ ಹೇಳಲಿದೆ. ದಶ ಮಹಾವಿದ್ಯೆಯರ ಹಿನ್ನೆಲೆ ಹಾಗೂ ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಸ್ಫೂರ್ತಿ ಪಡೆದು ಸಿನಿಮಾ ರೂಪಿಸಲಾಗಿದೆ.
ಈ ಸಿನಿಮಾದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್, ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್, ಬಾಲಿವುಡ್ ನಟಿ ಅದಾ ಶರ್ಮಾ ಮತ್ತು ಹೆಬಾ ಪಟೇಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಮಲ್ಟಿಸ್ಟಾರ್ ಸಿನಿಮಾ ಆಗಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಸಿನಿಮಾದ ಪಾತ್ರಗಳ ಬಗ್ಗೆ ಮಾತನಾಡಿರುವ ನಿರ್ಮಾಪಕ ಗುರು ದೇಶಪಾಂಡೆ, ‘ರಾಮರಸ’ದ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರಿಗೆ ಹೊಸ ಲೋಕವನ್ನು ಪರಿಚಯಿಸಲಿದೆ. ಇದು ಕೇವಲ ಸಿನಿಮಾವಲ್ಲ, ಒಂದು ದೈವಿಕ ಅನುಭವ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲರನ್ನೂ ಮೆಚ್ಚಿಸೋಕಾಗಲ್ಲ – ನಗುತ್ತಲೇ ಟ್ರೋಲ್‌ಗಳಿಗೆ ಟಕ್ಕರ್ ಕೊಟ್ಟ ಕತ್ರಿನಾ
ಒಟ್ಟಿನಲ್ಲಿ, ಮೋಷನ್ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ‘ರಾಮರಸ’ ಡಿಸೆಂಬರ್ 11ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.ಇದನ್ನೂ ಓದಿ: ಶಾಸಕರ ಭವನಕ್ಕೆ ಉಪಸಭಾಪತಿ ಉಮಾಶ್ರೀ ದಿಢೀರ್ ಭೇಟಿ; ವ್ಯವಸ್ಥೆ ಪರಿಶೀಲನೆ

