ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ (Katrina Kaif), ಇತ್ತೀಚೆಗೆ ಗರ್ಭಧಾರಣೆಯ ನಂತರ ದಪ್ಪಗಾಗಿದ್ದಕ್ಕೆ ಸಾಕಷ್ಟು ಟ್ರೋಲ್ ಎದುರಿಸಿದ್ದರು. ಆದರೆ, ಈ ಎಲ್ಲ ಟೀಕೆಗಳಿಗೆ ನಟಿ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಅವರ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಲಂಡನ್‌ನಲ್ಲಿ ನಡೆದ ತಮ್ಮ ಬ್ಯೂಟಿ ಬ್ರ್ಯಾಂಡ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಕತ್ರಿನಾ, ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಬಗ್ಗೆ ಯಾವುದೇ ಅಭಿಪ್ರಾಯಗಳು ಕೇಳಿಬಂದರೂ ಅದಕ್ಕೆ ಕಿವಿಗೊಡಬಾರದು. ಜನರ ಮಾತುಗಳು ನಿಮ್ಮ ಆತ್ಮವಿಶ್ವಾಸವನ್ನ ತಗ್ಗಿಸಲು ದಾರಿ ಮಾಡಿಕೊಡಬಾರದು ಎಂದು ನೇರವಾಗಿ ಉತ್ತರಿಸಿದ್ದಾರೆ.
ಟೀಕೆಗಳ ಬಗ್ಗೆ ಮಾತನಾಡಿದ ಕತ್ರಿನಾ ಕೈಫ್, ಈ ರೀತಿಯ ಟ್ರೋಲ್‌ಗಳು ನಮ್ಮ ನಿಲುವುಗಳ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಜಾಗರೂಕರಾಗಿರಬೇಕು. ಏಕೆಂದರೆ ಎಲ್ಲರ ಅಭಿಪ್ರಾಯ ಒಂದೇ ಆಗಿರುವುದಿಲ್ಲ. ಹೀಗಿರುವಾಗ ನಾವು ಎಲ್ಲರನ್ನೂ ಮೆಚ್ಚಿಸಲೂ ಆಗುವುದಿಲ್ಲ. ನಿಮ್ಮ ಸಾಮರ್ಥ್ಯವನ್ನು ಕುಗ್ಗಿಸುವ ಯಾವುದೇ ವಿಷಯಗಳಿದ್ದರೂ ಅವುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ, ಅವುಗಳ ಪಾಡಿಗೆ ಬಿಟ್ಟುಬಿಡಿ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟ ನಾನಾ ಪಾಟೇಕರ್ ನಿಧನ – ಗೋವಾ ಪೊಲೀಸರಿಂದ ಅಸ್ವಾಭಾವಿಕ ಸಾವು ಕೇಸ್ ದಾಖಲು
ಈ ರೀತಿಯ ಟ್ರೋಲ್‌ಗಳು ನಮ್ಮ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಜನರು ನಮ್ಮ ಗೆಲುವನ್ನ ಸಂಭ್ರಮಿಸದಿದ್ದಾಗ ಅಥವಾ ಬೆಂಬಲಿಸದಿದ್ದಾಗ ನಾವೇ ನಮ್ಮ ಜೀವನದಲಲ್ಲಿ ʻಚಿಯರ್‌ಲೀಡರ್ʼ ಆಗಿರಬೇಕು ಎಂದರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾನಾ ಪಾಟೇಕರ್ ಅಂತ್ಯಕ್ರಿಯೆ – ಪುಣೆಯ ಸ್ವಗ್ರಾಮದಲ್ಲಿ ಅಂತಿಮ ವಿಧಿವಿಧಾನ

