ಬೆಂಗಳೂರು: ಮುಂಬರುವ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1 (2nd PUC Exam) ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ.
ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2 ಪರೀಕ್ಷೆಗಳನ್ನ 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ – 1 ಮತ್ತು ಪರೀಕ್ಷೆ – 2 ಅನ್ನು 2027 ಫೆಬ್ರವರಿ 27 ರಿಂದ ಮೇ 15 ರವರೆಗೆ ನಡೆಸಲು ನಿರ್ಧಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 – 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 -2027 ಮೇ 24 ರಿಂದ ಮೇ 31ರ ವರೆಗೆ
ದ್ವಿತೀಯ ಪಿಯುಸಿ ಪರೀಕ್ಷೆ 1 – 2027 ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ
ದ್ವಿತೀಯ ಪಿಯುಸಿ ಪರೀಕ್ಷೆ 2 – 2027 ಮೇ 3 ರಿಂದ ಮೇ 15 ರವರೆಗೆ

SSLC ಪರೀಕ್ಷೆ -1 ವೇಳಾಪಟ್ಟಿ
* ಮಾರ್ಚ್ 22 ಕ್ಕೆ ಪ್ರಥಮ ಭಾಷೆ
* ಮಾರ್ಚ್ 25 ಕ್ಕೆ ವಿಜ್ಞಾನ, ರಾಜ್ಯಶಾಸ್ತ್ರ
* ಮಾರ್ಚ್ 27 ಕ್ಕೆ ದ್ವಿತೀಯ ಭಾಷೆ
* ಮಾರ್ಚ್ 30 ಕ್ಕೆ ಗಣಿತ, ಸಮಾಜಶಾಸ್ತ್ರ
* ಏಪ್ರಿಲ್ 2 ಕ್ಕೆ ತೃತೀಯ ಭಾಷೆ
* ಏಪ್ರಿಲ್ 3 ಕ್ಕೆ ಅರ್ಥಶಾಸ್ತ್ರ,
* ಏಪ್ರಿಲ್ 5 ಕ್ಕೆ ಸಮಾಜವಿಜ್ಞಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ತಾತ್ಕಾಲಿಕ ವೇಳಾಪಟ್ಟಿ
* ಮೇ 24- ಪ್ರಥಮ ಭಾಷೆ
* ಮೇ 25- ವಿಜ್ಞಾನ
* ಮೇ 26- ದ್ವೀತಿಯ ಭಾಷೆ
* ಮೇ 27-ಗಣಿತ
* ಮೇ 28- ತೃತೀಯ ಭಾಷೆ
* ಮೇ 29- ಸಮಾಜ ವಿಜ್ಞಾನ
2nd PUC ಪರೀಕ್ಷೆ 1 ವೇಳಾಪಟ್ಟಿ
ಫೆ 27 – ಕನ್ನಡ, ಅರೇಬಿಕ್
ಮಾರ್ಚ್ 1- ಇಂಗ್ಲಿಷ್
ಮಾರ್ಚ್ 2- ತಮಿಳು,ತೆಲುಗು, ಮಲಯಾಳಂ, ಮರಾಠಿ ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 3- ಭೂಗೋಳ ಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 4- ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 5- ಲೆಕ್ಕಶಾಸ್ತ್ರ
ಮಾರ್ಚ್ 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
ಮಾರ್ಚ್ 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಮಾರ್ಚ್ 11- ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ.
ಮಾರ್ಚ್ 12- ವ್ಯವಹಾರ ಅಧ್ಯಯನ, ಗಣಿತ
ಮಾರ್ಚ್ 13- ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 15- ರಾಜ್ಯಶಾಸ್ತ್ರ, ತರ್ಕಶಾಸ್ತ್ರ, ಗಣಕಶಾಸ್ತ್ರ
ಮಾರ್ಚ್ 16-ಇತಿಹಾಸ, ಜೀವಶಾಸ್ತ್ರ, ಗೃಹವಿಜ್ಞಾನ
2 ಪಿಯುಸಿ ಪರೀಕ್ಷೆ 2 ವೇಳಾಪಟ್ಟಿ
ಮೇ 3- ಕನ್ನಡ, ಅರೇಬಿಕ್
ಮೇ 4- ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
ಮೇ 5- ರಾಜ್ಯಶಾಸ್ತ್ರ, ಗಣಕಶಾಸ್ತ್ರ
ಮೇ 6- ಇತಿಹಾಸ, ರಸಾಯನಶಾಸ್ತ್ರ
ಮೇ 7- ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ.
ಮೇ 8- ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ
ಮೇ 10- ಅರ್ಥಶಾಸ್ತ್ರ, ಗಣಿತ
ಮೇ 11-ಹಿಂದಿ
ಮೇ 12- ಇಂಗ್ಲಿಷ್
ಮೇ 13- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14- ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
ಮೇ 15- ತಮಿಳು, ತೆಲುಗು, ಮಲಯಾಳಂ,ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ, ಡೀಟೇಲ್ ಆಟೋಮೊಬೈಲ್.

