ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ (Bus Ticket Price) ಏರಿಕೆಗೆ ಸರ್ಕಾರ ಮುಂದಾಗಿದೆ. ಬಸ್ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಕಮಿಟಿ ರಚಿಸಿದ್ದು, ಇಂದು ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.
ನಿವೃತ್ತ ಐಎಎಸ್ ಅಧಿಕಾರಿ ಅತಯಲ್ ತಿವಾರಿ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. 2 ತಿಂಗಳು ಅಧ್ಯಯನ ನಡೆಸಿ ಇಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಮುಂಬರುವ ಸಚಿವ ಸಂಪುಟದಲ್ಲಿ ಟಿಕೆಟ್ ದರ ಏರಿಕೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮದ ಆರ್ಥಿಕ ಸ್ಥಿತಿಗತಿ ಹಾಗೂ ಟಿಕೆಟ್ ಹೆಚ್ಚಳದ ಬಗ್ಗೆ ತಜ್ಞರ ವರದಿ ಇಂದು ಸರ್ಕಾರದ ಕೈಸೇರಲಿದೆ. ಇದನ್ನೂ ಓದಿ: ವೇದಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು
ಇತ್ತೀಚಿಗೆ ಸಾರಿಗೆ ಸಚಿವ ಬೈರತಿ ಸುರೇಶ್ ಈ ಕುರಿತು ಮಾತನಾಡಿ, ಟಿಕೆಟ್ ದರ ಏರಿಕೆ ಅನಿವಾರ್ಯತೆ ಇದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಜಾರಿಗೆ ತರುತ್ತೇವೆ ಎಂದು ಸುಳಿವು ನೀಡಿದ್ದರು. 12% ಮೇಲೆಯೇ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆಯಿದೆ. 2025ರ ಜನವರಿಯಲ್ಲಿ ಸಾರಿಗೆ ಇಲಾಖೆ ಟಿಕೆಟ್ ದರ 15% ಏರಿಕೆ ಮಾಡಿತ್ತು. 2025ರಲ್ಲಿ ಸಾಮಾನ್ಯ ಬಸ್ಗಳ ಟಿಕೆಟ್ ದರ ಪ್ರತಿ ಸ್ಟೇಜ್ಗೆ 6 ರೂ. ಏರಿಕೆ ಮಾಡಿತ್ತು. ಈ ಬಾರಿ ಸಾರಿಗೆ ನಿಗಮಗಳು 40%ರಷ್ಟು ಟಿಕೆಟ್ ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ 12% ಮೇಲೆ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕುಶಾಲತೋಪು ಸಿಡಿಸಿ ದಸರಾ ಗಜಪಡೆಗೆ ತಾಲೀಮು
ಬಿಎಂಟಿಸಿ ನಿಗಮದಲ್ಲಿ ಟಿಕೆಟ್ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಬಿಎಂಟಿಸಿ ಬಸ್ ಟಿಕೆಟ್ ದರ 15-17% ಏರಿಕೆಯಾಗುವ ಸಾಧ್ಯತೆಯಿದೆ. ಬೇರೆ ನಿಗಮದ ದರಕ್ಕಿಂತ ಬಿಎಂಟಿಸಿ ಟಿಕೆಟ್ ದರ ಕೊಂಚ ಹೆಚ್ಚಳವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: 4 ವರ್ಷಗಳ ಬಳಿಕ ರೆಪೋ ದರ ಏರಿಕೆ – ದುಬಾರಿಯಾಗಲಿದೆ ಇಎಂಐ

