ಬಳ್ಳಾರಿ: ಈಜಲು (Swimming) ತೆರಳಿದ್ದ ಬಾಲಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಳ್ಳಾರಿ (Ballari) ಜಿಲ್ಲೆ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿ ಹರಿಯುವ ವೇದಾವತಿ ನದಿಯಲ್ಲಿ (Vedavathi River) ನಡೆದಿದೆ.
ರಾರಾವಿ ಗ್ರಾಮದ ಓಂ ಪ್ರಸಾದ್ (15) ಮೃತ ಬಾಲಕ. 10ನೇ ತರಗತಿಯಲ್ಲಿ ಓದುತ್ತಿದ್ದ ಮೃತ ಬಾಲಕ ಓಂ ಪ್ರಸಾದ್, ಶಾಲೆಗೆ ರಜೆ ಹಿನ್ನೆಲೆ ಮಂಗಳವಾರ ಸಂಜೆ ಸ್ನೇಹಿತರ ಜೊತೆ ವೇದಾವತಿ ನದಿಗೆ ಈಜಾಡಲು ತೆರಳಿದ್ದ. ನೀರಿನ ಆಳ ಅರಿಯದೇ ನದಿಗೆ ಇಳಿದಾಗ, ನದಿಯ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದ. ಇದನ್ನೂ ಓದಿ: ನ್ಯುಮೋನಿಯಾದಿಂದ ಸಂಶೋಧಕಿ ಸಾವು, ರಷ್ಯಾದಲ್ಲಿ ಪ್ಲೇಗ್ ಪತ್ತೆಯಾಗಿಲ್ಲ: WHO ಸ್ಪಷ್ಟನೆ
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಜೊತೆ ಸ್ಥಳೀಯರೂ ಸೇರಿ ಶೋಧ ಕಾರ್ಯ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಇಂದು ಬೆಳಗ್ಗೆ ಬಾಲಕನ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 4 ವರ್ಷಗಳ ಬಳಿಕ ರೆಪೋ ದರ ಏರಿಕೆ – ದುಬಾರಿಯಾಗಲಿದೆ ಇಎಂಐ

