ನವದೆಹಲಿ: ಹಬ್ಬದ ವೇಳೆ ಬೀದಿಬದಿ ವ್ಯಾಪಾರಿಗಳ (Street Vendors) ತೆರವುಗೊಳಿಸಬೇಡಿ ಎಂದು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ ವ್ಯಾಪಾರಿಗಳನ್ನು ಅನಗತ್ಯವಾಗಿ ತೆರವುಗೊಳಿಸಬೇಡಿ. ಸ್ಥಳೀಯ ಮಾರಾಟಗಾರರು, ಬೀದಿ ವ್ಯಾಪಾರಿಗಳು, ಕುಂಬಾರರು, ಸಣ್ಣ ವ್ಯಾಪಾರಿಗಳ ಹಕ್ಕು ರಕ್ಷಣೆ ಮಾಡಿ ಎಂದು ನಿರ್ದೇಶನ ನೀಡಿದೆ. ಇದನ್ನೂ ಓದಿ: ಕ್ರಿಮಿನಲ್ ಕೇಸ್ಗೆ ತೆರಿಗೆ ವಂಚನೆ ಮಿತಿ 1ರಿಂದ 5 ಕೋಟಿಗೆ ಏರಿಕೆ; GST ನಿಯಮಗಳಲ್ಲಿ ಬದಲಾವಣೆ ಪ್ರಸ್ತಾವ
ಅಗ್ನಿ ಸುರಕ್ಷತೆ, ಸಾರ್ವಜನಿಕ ಸುರಕ್ಷತೆಗಾಗಿ ತೆರವು ಅನಿವಾರ್ಯವಾದರೆ ಪರ್ಯಾಯ ಮಾರಾಟ ಸ್ಥಳ ಕಲ್ಪಿಸಬೇಕು. ವ್ಯಾಪಾರಿಗಳ ಸರಕುಗಳನ್ನು ಅನಿಯಮಿತವಾಗಿ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು NHRC ಆದೇಶದಲ್ಲಿ ತಿಳಿಸಿದೆ.
ಕಿರುಕುಳ, ಸುಲಿಗೆ, ಅನಗತ್ಯ ಹಸ್ತಕ್ಷೇಪದ ದೂರುಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯರಿಗೆ ಧ್ವನಿ ಮನೋಭಾವದಲ್ಲಿ ಸ್ಥಳೀಯ ವ್ಯಾಪಾರ, ಸಾಂಪ್ರದಾಯಿಕ ಉದ್ಯಮಗಳಿಗೆ ಉತ್ತೇಜನ ನೀಡುವಂತೆ ಸೂಚಿಸಿದೆ. ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರೇ ಗಮನಿಸಿ – ಇಂದಿನಿಂದ 60 ದಿನ ರೇಸ್ ಕೋರ್ಸ್ ರಸ್ತೆ ಬಂದ್
NHRC ನಿರ್ದೇಶನಗಳನ್ನು ಜಿಲ್ಲಾಧಿಕಾರಿ, ಪುರಸಭೆ, ಪೊಲೀಸ್ ಅಧಿಕಾರಿಗಳಿಗೆ ತಲುಪಿಸಬೇಕು. ಈ ವಿಚಾರವಾಗಿ ಕ್ರಮ ತೆಗೆದುಕೊಂಡ ಬಗ್ಗೆ ಅಕ್ಟೋಬರ್ 18ರೊಳಗೆ ಮಾಹಿತಿ ನೀಡಲು ಸೂಚನೆ ನೀಡಿದೆ.

