ವಾಷಿಂಗ್ಟನ್: ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಭಾಷಣಕ್ಕೆ ಭಾರತದ ತಿರುಗೇಟು ನೀಡಿದ್ದು, ಭಯೋತ್ಪಾದನೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗಹ್ಲೋಟ್ (Petal Gahlot) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ ಶೆಹಬಾಜ್ ಶರೀಫ್ ಭಾರತದ ವಿರುದ್ಧ ಮಾಡಿದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನವು (Pakistan) ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ಖಂಡಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುರಿತ ಪಾಕಿಸ್ತಾನದ ಪ್ರಸ್ತಾಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಭಯೋತ್ಪಾದಕರು ತಪ್ಪಿಸಿಕೊಳ್ಳಲು ಈಗ ಎಲ್ಲಿಯೂ ಜಾಗವಿಲ್ಲ. ಭಾರತ ತನ್ನ ರಕ್ಷಣೆಗೆ ಎಂದಿಗೂ ಬದ್ಧವಾಗಿದ್ದು, ಪಾಕಿಸ್ತಾನದ ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇರಾನ್ನ 7 ದಿನಗಳ ಕದನ ವಿರಾಮ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್ – ಮಧ್ಯಂತರ ಚುನಾವಣೆ ಬಳಿಕ ಮತ್ತೆ ಬಾಂಬ್ ದಾಳಿ?
#WATCH | New York | Exercising the right of reply of India on Pakistan PM Shehbaz Sharif’s speech, First Secretary in India’s Permanent Mission to the UN, Petal Gahlot says, “This afternoon, the General Assembly heard some bizarre remarks from the representative of Pakistan. This… pic.twitter.com/ICH056qzQB
— ANI (@ANI) September 26, 2026
ಪಾಕಿಸ್ತಾನದ ಪ್ರತಿನಿಧಿಗಳು ವರ್ಷದಿಂದ ವರ್ಷಕ್ಕೆ ಒಂದೇ ಸುಳ್ಳನ್ನು ಪುನರಾವರ್ತಿಸಿದರೆ ಅದು ಸತ್ಯವಾಗುವುದಿಲ್ಲ. ಆ ದೇಶದ ಭಯೋತ್ಪಾದನೆ, ವಂಚನೆ ಮತ್ತು ದ್ವಂದ್ವ ನೀತಿಗಳು ಜಗತ್ತಿಗಾಗಲಿ ಅಥವಾ ಸ್ವತಃ ಪಾಕಿಸ್ತಾನಕ್ಕಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪಾಕ್ ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಧೋರಣೆಯನ್ನು ಪ್ರಶ್ನಿಸಿ, ಆ ದೇಶದ 27ನೇ ಸಂವಿಧಾನ ತಿದ್ದುಪಡಿ ಹಾಗೂ ಅಲ್ಲಿನ ನಿಜವಾದ ಆಡಳಿತಗಾರನಿಗೆ ನೀಡಲಾಗಿರುವ ಜೀವಾವಧಿ ವಿನಾಯಿತಿಯ ಬಗ್ಗೆಯೂ ಟೀಕಿಸಿದ್ದಾರೆ.ಇದನ್ನೂ ಓದಿ: ಟ್ರಂಪ್ ನಮ್ಮನ್ನ ಉಳಿಸಿದ್ರು – ಆಪರೇಷನ್ ಸಿಂಧೂರದ ಭಯ ನೆನಪಿಸಿಕೊಳ್ಳುತ್ತಲೇ ಟ್ರಂಪ್ಗೆ ಪಾಕ್ ಪ್ರಧಾನಿ ಧನ್ಯವಾದ
#WATCH | New York | First Secretary in India’s Permanent Mission to the UN, Petal Gahlot says, “At the heart of the issue is the long-standing practice of cross-border terrorism by Pakistan. We demonstrated last year that terrorists will have nowhere to run and nowhere to hide.… pic.twitter.com/AW75mY3ulj
— ANI (@ANI) September 26, 2026
ಧರ್ಮ ಸಹಿಷ್ಣುತೆಯ ಬಗ್ಗೆ ಭಾರತದ ವಿರುದ್ಧ ಟೀಕೆ ಮಾಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಇತರ ಕಾನೂನುಗಳ ಬಗ್ಗೆ ವಿಶ್ವಕ್ಕೆ ಗೊತ್ತಿದೆ. ಅಲ್ಲದೇ ವಿಶ್ವದಲ್ಲೇ ಭಯೋತ್ಪಾದನೆಯನ್ನು ಹರಡುವಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನಾ ನೆಲೆಯ ಸಮೀಪವೇ ಆಶ್ರಯ ಪಡೆದಿದ್ದ. ಪಾಕಿಸ್ತಾನದ ಈ ಟೀಕೆಗಳು ಸಂಪೂರ್ಣವಾಗಿ ಅಸಂಬದ್ಧ ಮತ್ತು ಕಪಟತನದಿಂದ ಕೂಡಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಸರ್ಕಾರದಿಂದ ಬಾರದ ಕೋಟ್ಯಂತರ ರೂಪಾಯಿ ಅನುದಾನ – ಪತ್ರ ಬರೆದು ಕೆಆರ್ಐಡಿಎಲ್ ಎಇಇ ನಾಪತ್ತೆ!

