ಬ್ರಾಝಾವಿಲ್ಲೆ: ಕಾಂಗೋದಲ್ಲಿ (Congo) ವಿಮಾನ ಪತನಗೊಂಡಿದ್ದು, ಅಪಘಾತದಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು (Military Officials) ಸೇರಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಂದು ಕಾಂಗೋ ಸೇನೆಯ ವಕ್ತಾರ ಮೇಜರ್ ಜನರಲ್ ಎಫೊಮಿ ತಿಳಿಸಿದ್ದಾರೆ
DR Congo🇨🇩: Plane crash in Kenge, Kwango province #RDC #KWANGO #avion pic.twitter.com/5aYI86rqbz
— marknehpets (@mapkpets) September 25, 2026
ಮೃತಪಟ್ಟ ಇಬ್ಬರು ಹಿರಿಯ ಸೇನಾ ಅಧಿಕಾರಿಗಳಲ್ಲಿ ಮಿಲಿಟರಿ ಕೋರ್ಟ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಾಲಾಯಿ ಟಿಯೆಂಡೆ ಮತ್ತು ಸಶಸ್ತ್ರ ಪಡೆಗಳ ಲೆಕ್ಕ ಪರಿಶೋಧಕ ಜನರಲ್ (ಆಡಿಟರ್ ಜನರಲ್) ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಸೇರಿದ್ದಾರೆ. ಈ ಇಬ್ಬರು ಜನರಲ್ ಶ್ರೇಣಿಯ ಅಧಿಕಾರಿಗಳಲ್ಲದೇ ವಿಮಾನ ಸಿಬ್ಬಂದಿ ಸೇರಿ ಇನ್ನೂ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
OVER DOZEN DEAD after PLANE CRASH in DR CONGO
AMONG 14 KILLED: Head of military court, and auditor general of armed forces
FIERY WRECKAGE and DEBRIS strewn ACROSS CRASH SITE pic.twitter.com/Hw36wJhoG0
— RT (@RT_com) September 25, 2026
ತಾಂತ್ರಿಕ ದೋಷದಿಂದ ವಿಮಾನ ಪತನ
ನೈಋತ್ಯ ಭಾಗದ ಕಿಕ್ವಿಟ್‌ನಿಂದ ರಾಜಧಾನಿ ಕಿನ್ಶಾಸಾಗೆ ಮರಳುತ್ತಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಂಗೆ ಎಂಬಲ್ಲಿ ಪತನಗೊಂಡಿದೆ (Plane Crash). ಈ ವೇಳೆ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಘಟನೆಯ ವರದಿಯಾದ ತಕ್ಷಣವೇ ಅಪಘಾತಕ್ಕೆ ಕಾರಣ ಪತ್ತೆಹಚ್ಚಲು ತನಿಖೆ ಪ್ರಾರಂಭಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಮಂಡಳಿಯ ಅಧ್ಯಕ್ಷ ಟ್ರೈಫೋನ್ ಕಿನ್-ಕಿಯೆ ಮುಲುಂಬಾ ತಿಳಿಸಿದ್ದಾರೆ. ಕಳೆದ ವರ್ಷ ಬಂಡಾಯ ಗುಂಪುಗಳು ಪ್ರಮುಖ ನಗರಗಳನ್ನ ವಶಪಡಿಸಿಕೊಳ್ಳಲು ನಡೆಸಿದ ಸರಣಿ ದಾಳಿಗಳ ನಂತರ, ಕಾಂಗೋ ಸೇನೆಯು ಪೂರ್ವ ಪ್ರದೇಶದಲ್ಲಿ ರುವಾಂಡಾ ಬೆಂಬಲಿತ M23 ಬಂಡಾಯ ಗುಂಪು ಸೇರಿದಂತೆ ಅನೇಕ ಬಂಡಾಯ ಗುಂಪುಗಳ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

