ಧನುಷ್ (Dhanush) ಅಭಿನಯದ ತಮಿಳು ಆಕ್ಷನ್ ಸಿನಿಮಾ ‘ಓಂ’ (OM) ಅಕ್ಟೋಬರ್ 16 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರರಂಗ ಏಕಾಏಕಿ ರಿಲೀಸ್ ದಿನಾಂಕವನ್ನು ಮುಂದೂಡಿದೆ.
ತಮಿಳು ನಟ-ನಿರ್ದೇಶಕ ಧನುಷ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ʼಓಂʼ ಚಿತ್ರವು ರಜನಿಕಾಂತ್ ಅವರ ʻಜೈಲರ್ 2ʼ ಸಿನಿಮಾ ಜೊತೆಗೆ ಸ್ಪರ್ಧೆಗಿಳಿಯುವ ಸಾಧ್ಯತೆ ಇತ್ತು. ಆದರೆ, ಏಕಾಏಕಿ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ.
ಧನುಷ್ X ಖಾತೆಯಲ್ಲಿ, “ಇಂತಹ ಸಮಯದಲ್ಲಿ, ಚಿತ್ರದ ಬಿಡುಗಡೆಯನ್ನು ಬದಲಾಯಿಸುವುದು ಸವಾಲಿನದ್ದಾಗಿದೆ. ʼʼನಮ್ಮ ಸೂಪರ್‌ಸ್ಟಾರ್ ರಜನಿಕಾಂತ್ ಸರ್, ನಾವೆಲ್ಲರೂ ವರ್ಷಗಳಿಂದ ಮೆಚ್ಚಿಕೊಂಡು ಪೂಜಿಸುತ್ತಿರುವ ಅವರ ಚಿತ್ರವು ನಮ್ಮ ಸಿನಿಮಾ ಬಿಡುಗಡೆಯಾಗುವ ಒಂದು ದಿನ ಮೊದಲು (ಅ.15) ಬಿಡುಗಡೆಯಾಗುತ್ತಿದೆ, ಅವರ ಮೇಲಿನ ಅಪಾರ ಗೌರವದಿಂದಾಗಿ, ನಮ್ಮ ಚಿತ್ರ ಓಂ ಬಿಡುಗಡೆಯನ್ನು ನಂತರದ ದಿನಾಂಕಕ್ಕೆ ಮುಂದೂಡಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
“ನಟ ಸೂರ್ಯ ಅವರ ಚಿತ್ರವನ್ನು ಈಗಾಗಲೇ ಅದೇ ದಿನಾಂಕಕ್ಕೆ ಘೋಷಿಸಲಾಗಿದೆ. ಅವರು ಮೊದಲು ತಮ್ಮ ಸಿನಿಮಾ ದಿನಾಂಕವನ್ನು ಘೋಷಿಸಿದ್ದರು. ಆದ್ದರಿಂದ ದೀಪಾವಳಿ ಸಮಯದಲ್ಲೂ ಓಂ ಸಿನಿಮಾ ಬಿಡುಗಡೆ ಅಸಾಧ್ಯ. ದೊಡ್ಡ ಚಿತ್ರಗಳು ಪರಸ್ಪರ ತಿಳುವಳಿಕೆಯನ್ನು ಹೊಂದಿರಬೇಕು ಮತ್ತು ಪರಸ್ಪರ ನಿರ್ಧಾರಗಳನ್ನು ಗೌರವಿಸಬೇಕು, ಸಿನಿಮಾ ಮತ್ತು ಚಿತ್ರೋದ್ಯಮದ ಏಳಿಗೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ನಾವು ಬಲವಾಗಿ ನಂಬುತ್ತೇವೆ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಗ್ಯಾಂಗ್‌ರೇಪ್ ಕೇಸ್ | ಸರ್ಚ್ ಹಿಸ್ಟರಿ ಡಿಲೀಟ್, ಬಟ್ಟೆ ವಾಶ್ – ಸಾಕ್ಷ್ಯ ನಾಶಕ್ಕೆ ಆರೋಪಿಗಳಿಂದ ಮಾಸ್ಟರ್ ಪ್ಲ್ಯಾನ್!
#OM pic.twitter.com/tK5f6bigTo
— Dhanush (@dhanushkraja) September 23, 2026
ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಧನುಷ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಜಗಳ ಬಿಡಿಸಲು ಬಂದಿದ್ದವನಿಗೆ ಚಾಕು ಇರಿತ – ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವು

