ನವದೆಹಲಿ/ಬೆಂಗಳೂರು: ಪಿಎಸ್‌ಐ (PSI) ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಶುಕ್ರವಾರಕ್ಕೆ (ಸೆ.25) ಮುಂದೂಡಿದೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಆರ್‌ಡಿ ಪಾಟೀಲ್ ವಿರುದ್ಧದ ಇತರೆ ಪ್ರಕರಣಗಳ ಮಾಹಿತಿ ಕೇಳಿದೆ. ಅದಕ್ಕೆ ನಮ್ಮ ವಿರುದ್ಧ 22 ಪ್ರಕರಣಗಳಿವೆ, ಅದರ ಮಾಹಿತಿ ನಮ್ಮಲ್ಲಿ ಇದೆ ಎಂದು ಆರ್‌ಡಿ ಪಾಟೀಲ್ (RD Patil) ಪರ ವಕೀಲರು ವಾದಿಸಿದರು. ಈ ವೇಳೆ ಆರ್‌ಡಿ ಪಾಟೀಲ್ ವಿರುದ್ಧ 24 ಕೇಸ್‌ಗಳಿದೆ ಎಂದು ಆಕ್ಷೇಪ ಕೇಳಿಬಂದಿದ್ದು, ಈ ಹಿನ್ನೆಲೆ ಕೋರ್ಟ್ ವಿಸ್ತೃತ ಮಾಹಿತಿ ಸಲ್ಲಿಕೆಗೆ ಸೂಚನೆ ನೀಡಿದೆ. ಇದನ್ನೂ ಓದಿ: ಅಕ್ಟೋಬರ್ ಮಧ್ಯದಲ್ಲಿ ʻನಮ್ಮ ಮೆಟ್ರೋ ಪಿಂಕ್ ಲೈನ್ʼ ಓಪನ್?
ಈ ವೇಳೆ ಮೂರು ವರ್ಷದಿಂದ ನ್ಯಾಯಂಗ ಬಂಧನದಲ್ಲಿದ್ದಾರೆ, ಶೀಘ್ರ ಜಾಮೀನು ನೀಡುವಂತೆ ಆರ್‌ಡಿ ಪಾಟೀಲ್ ಪರ ವಕೀಲರು ಕೇಳಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.

