ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ (Kasturirangan Report) ವಿರೋಧಿಸಿ ಸೋಮವಾರ (ಸೆ.21) ಶೃಂಗೇರಿ ಬಂದ್ಗೆ (Sringeri Bandh) ರೈತ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿವೆ.
ಮಲೆನಾಡಿಗೆ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಬಂದು ಹೋದ ಬೆನ್ನಲ್ಲೇ ಶೃಂಗೇರಿ ಬಂದ್ಗೆ ಕರೆ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಬಂದ್ ಆಗಲಿದ್ದು, ತಾಲೂಕು ಸಂಪೂರ್ಣ ಸ್ಥಬ್ಧವಾಗಲಿದೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಲು ನಿರ್ಧಾರಿಸಿದ್ದಾರೆ. ಇದನ್ನೂ ಓದಿ: ನೀವ್ಯಾರು ಹೊಸದಾಗಿ ಒತ್ತುವರಿ ಮಾಡ್ಬೇಡಿ, ಇರೋ ಜಮೀನನ್ನು ಭದ್ರವಾಗಿ ಇಟ್ಕೊಳ್ಳಿ: ರೈತರಿಗೆ ಡಿಕೆಶಿ ಸಲಹೆ
ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕಳೆದೊಂದು ತಿಂಗಳಿಂದ ಮಲೆನಾಡಿನ ವಿವಿಧ ಭಾಗಗಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈಗ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಿದೆ. ಕಸ್ತೂರಿ ರಂಗನ್ ವರದಿಯಿಂದ ಕಾಫಿನಾಡಿನ 137ಕ್ಕೂ ಹೆಚ್ಚು ಗ್ರಾಮಗಳು ಆತಂಕದಲ್ಲಿವೆ.
ಸೆ.19 ರಂದು ಕಸ್ತೂರಿರಂಗನ್ ವರದಿ ಬಗ್ಗೆ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನ ರೈತರು ಹಾಗೂ ಸ್ಥಳೀಯ ಶಾಸಕರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಅವರು ಸಂವಾದ ನಡೆಸಿದ್ದರು. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಸಂವಾದ ವಿಧಾನಸೌಧದಲ್ಲಿ ಕುಳಿತು ಮಾಡಿದ್ರೇ ಪ್ರಯೋಜನ ಆಗಲ್ಲ: ಡಿ.ಕೆ ಶಿವಕುಮಾರ್

