ರಿಯಾದ್: ಯೆಮೆನ್‌ನ ಹೌತಿ (Houthis) ಬಂಡುಕೋರರು ಸೌದಿ ಅರೇಬಿಯಾದ (Saudi Arabia) ಮೇಲೆ ಬೃಹತ್ ದಾಳಿ ನಡೆಸಿದೆ. ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಳಿಗೊಳಗಾಗಿ ಹೊಗೆ ಆವರಿಸಿದ ದೃಶ್ಯದ ವಿಡಿಯೋ ವೈರಲ್ ಆಗಿದೆ.
ರಾಜಧಾನಿಯಲ್ಲಿ ಎರಡು ಸ್ಫೋಟಗಳ ಸದ್ದು ಕೇಳಿಬಂದಿತು . ಪರಿಣಾಮವಾಗಿ, ಕಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಯಿತು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಎಚ್ಚರಿಕೆ- ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ
ರಿಯಾದ್‌ನಲ್ಲಿರುವ (Riyadh Airport) ಸೂಕ್ಷ್ಮ ಗುರಿಗಳು ಹಾಗೂ ಯಾನ್ಬುವಿನಲ್ಲಿರುವ ಸೌದಿ ಅರಾಮ್ಕೊ ಘಟಕವನ್ನು ಟಾರ್ಗೆಟ್ ಮಾಡಿರುವುದಾಗಿ ಹೌತಿಗಳು ತಿಳಿಸಿದ್ದಾರೆ. ಈ ದಾಳಿಗಳಲ್ಲಿ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಬಳಸಿದ್ದಾಗಿ ಬಂಡುಕೋರರು ಹೇಳಿದ್ದಾರೆ.
ರಿಯಾದ್ ಅನ್ನು ಗುರಿಯಾಗಿಸಿಕೊಂಡಿದ್ದ ಹೌತಿ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ತಡೆಹಿಡಿದು ನಾಶಪಡಿಸಿರುವುದಾಗಿ ಸೌದಿ ವಾಯು ರಕ್ಷಣಾ ಪಡೆಗಳು ತಿಳಿಸಿವೆ.
ಸೌದಿ ಅಧಿಕಾರಿಗಳು ಈ ಹಿಂದೆ ರಿಯಾದ್‌ಗೆ ವೈಮಾನಿಕ ಬೆದರಿಕೆಯ ಎಚ್ಚರಿಕೆಯನ್ನು ನೀಡಿದ್ದರು. ಹೌತಿಗಳೊಂದಿಗಿನ ಉದ್ವಿಗ್ನತೆ ಹೆಚ್ಚಾದ ನಂತರ ಸೌದಿ ರಾಜಧಾನಿಗೆ ನೀಡಲಾದ ಇಂತಹ ಮೊದಲ ಎಚ್ಚರಿಕೆ ಇದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಮಾಜ್ ವೇಳೆ ಪಾಕಿಸ್ತಾನದ ಮಸೀದಿಯಲ್ಲಿ ಭಾರೀ ಸ್ಫೋಟ – 16 ಮಂದಿ ದುರ್ಮರಣ
ಹೌತಿಗಳು ವಿಮಾನ ನಿಲ್ದಾಣದ ಇಂಧನ ಸಂಗ್ರಹಣಾ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ರಿಯಾದ್‌ನಲ್ಲಿ ಯಾವುದೇ ಸಾವು-ನೋವು ಅಥವಾ ಭಾರಿ ಹಾನಿಯಾದ ಬಗ್ಗೆ ತಕ್ಷಣದ ವರದಿಗಳಿಲ್ಲ.

